Publish Date: Fri, 04 Aug 2017 (12:43 IST)
Updated Date: Fri, 04 Aug 2017 (12:45 IST)
ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಐಟಿ ಅಧಿಕಾರಿಗಳ ತಪಾಸಣೆ ಮುಂದುವರಿದಿದೆ. ಈ ನಡುವೆ ಸದಾಶಿವನ ನಗರದ ನಿವಾಸಕ್ಕೆ ಅಣ್ಣನ ಭೇಟಿಗೆ ಬಂದ ಸಹೋದರ ಡಿಕೆ ಸುರೇಶ್ ಅವರನ್ನು ಭದ್ರತಾ ಸಿಬ್ಬಂದಿ ತಡೆದ ಘಟನೆ ನಡೆದಿದೆ.
ತಮ್ಮ ಬೆಂಬಲಿಗರ ಜತೆ ಬಂದ ಡಿಕೆ ಸುರೇಶ್ ಅವರನ್ನು ಐಟಿ ತಪಾಸಣೆ ಮುಗಿಯುವವರೆಗೆ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಭದ್ರತಾ ಸಿಬ್ಬಂದಿ ತಡೆದರು. ಹೀಗಾಗಿ ಸುರೇಶ್ ಮತ್ತು ಬೆಂಬಲಿಗರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗಲಾಟೆಯಾಗುತ್ತಿದ್ದಂತೆ ಒಳಗಿದ್ದ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ನಂತರ ಐಟಿ ಅಧಿಕಾರಿಗಳು ಡಿಕೆ ಸುರೇಶ್ ಅವರನ್ನು ಒಳಗೆ ಬಿಡಲು ಒಪ್ಪಿಗೆ ನೀಡಿದರು. ಆದರೆ ಬೆಂಬಲಿಗರು ಹೊರಗೇ ಉಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ