Webdunia - Bharat's app for daily news and videos

Install App

ಮೂರನೆಯ ದಿನವೂ ಮುಂದುವರೆದ ಐಟಿ ರೇಡ್: ಜೊತೆಯಲ್ಲೇ ಪ್ರಭಾವಿ ಕುಳಗಳಿಗೆ ಶುರುವಾದ ಇಡಿ‌ ಭಯ

Webdunia
ಶನಿವಾರ, 9 ಅಕ್ಟೋಬರ್ 2021 (20:40 IST)
ಬೆಂಗಳೂರು: ನಗರದಲ್ಲಿ ನೆಡೆಯುತ್ತಿರುವ ಐಟಿ ದಾಳಿಯ ಬಳಿಕ ಈಗ ಇ.ಡಿ‌ ಭಯ ಟ್ಯಾಕ್ಸ್ ಕಳ್ಳರಿಗೆ ಹಾಗೂ ಅಕ್ರಮ ಹಣ ಸಂಪಾದಿಸಿದ್ದ ಭಾರಿ ಕುಳಗಳಿಗೆ ಶುರುವಾಗಿದೆ. ಎರಡು ದಿನಗಳಿಂದ ಬೆಂಗಳೂರಿನಲ್ಲಿ ನಡೆದಿರುವ ಐಟಿ ದಾಳಿ ಇಂದೂ ಸಹ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.
 
ಬಿಎಸ್ ವೈ ಅಪ್ತ ಉಮೇಶ್, ಚಾರ್ಟೆಡ್ ಅಕೌಂಟೆಂಟ್ ಗಳು ಹಾಗೂ ಕಂಟ್ರಾಕ್ಟರ್ ಗಳ ಮೇಲೆ ನಡೆದಿದ್ದ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಪತ್ತೆಯಾಗಿದೆ. ಪಿ.ಎಂ.ಎಲ್.ಎ ಕಾಯ್ದೆಯನ್ನು ಉಲ್ಲಂಘಿಸಿರುವುದು ಐಟಿ ದಾಳಿ ವೇಳೆ ಬೆಳಕಿಗೆ ಬಂದಿದೆ. ತೆರಿಗೆ ವಂಚನೆ ಜೊತೆ ಜೊತೆಗೆ  ಆಕ್ರಮ ಹಣ ಮತ್ತು ಸಂಪತ್ತು ಸಂಗ್ರಹಿಸಿರುವ ಹಲವು ಕಂಟ್ರಾಕ್ಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ಶೀಘ್ರವೇ ಐಟಿಯಿಂದ ಇ.ಡಿ ಗೆ ಪತ್ರ ರಾವನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಲವು ಕಂಟ್ರಾಕ್ಟರ್ ಗಳಿಗೆ ನಡುಕ ಶುರುವಾಗಿದೆ ಎನ್ನಲಾಗುತ್ತಿದೆ.
 
ಮೂರನೇ ದಿನವೂ ಮುಂದುವರೆದ ಐಟಿ ರೇಡ್: 
 
ಸತತ 48 ಘಂಟೆಗಳಿಂದ ನಡೆಯುತ್ತಿರುವ ಐಟಿ ಸರ್ಚ್ ಇಂದೂ ಮುಂದುವರೆದಿದೆ. ಉಮೇಶ್ ಆಪ್ತ ಸೋಮಶೇಖರ್ ಮನೆಯನ್ನು ಜಾಲಾಡಿ ಕಡತಗಳನ್ನು  ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗುರುವಾರ ರಾತ್ರಿ ಸೋಮಶೇಖರ್ ಮನೆಯಲ್ಲೇ ಐಟಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು ಎನ್ನುವ ಮಾಹಿತಿ ದೊರೆತಿದೆ.
 
ಉಮೇಶ್ ಗೆ ಅತ್ಯಾಪ್ತಾನಾಗಿದ್ದ ಕ್ಲಾಸ್ 1 ಗುತ್ತಿಗೆದಾರ ಸೋಮಶೇಖರ್ ನೀರಾವರಿ ನಿಗಮದ ಹಲವು ಕಾಂಟ್ರಾಕ್ಟ್ ಗಳನ್ನು ಪಡೆಯುತ್ತಿದ್ದ. ಇಬ್ಬರ ನಡುವೆ ಹಲವು ಅಕ್ರಮ ವ್ಯವಹಾರಗಳು ನಡೆದಿರುವ ಬಗ್ಗೆ ಮಾಹಿತಿಯನ್ನು ಐಟಿ ಆಫೀಸರ್ಸ್ ಕೆಲೆ ಹಾಕುತ್ತಿದ್ದಾರೆ.ಸೋಮಶೇಖರ್ ಬ್ಯಾಂಕ್ ಪಾಸ್ ಬುಕ್ ಸೇರಿ ಹಲವು ದಾಖಲೆಗಳ ಪರಿಶೀಲನೆಯನ್ನು ಇದೀಗ ನೆಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments