Publish Date: Wed, 15 Feb 2017 (15:03 IST)
Updated Date: Wed, 15 Feb 2017 (15:05 IST)
ಐಟಿ ರೈಡ್ ನಡೆದ ತಕ್ಷಣ ಯಾರು ಅಪರಾಧಿಗಳಾಗಲ್ಲ. ತನಿಖೆಯಾದ ನಂತರ ತೆರಿಗೆ ವಂಚಿಸಿದ್ದಲ್ಲಿ ಅಪರಾಧಿಗಳಾಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಶಾಸಕ ಎಂಟಿಬಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಶಾಸಕ ನಾಗರಾಜ್ ಕೈ, ಬಾಯಿ ಶುದ್ಧವಾಗಿಟ್ಟುಕೊಂಡಿರುವ ಪ್ರಾಮಾಣಿಕ ಶಾಸಕ ಅವರು ಸ್ವಂತ ಶ್ರೀಮಂತರರಾಗಿದ್ದು ಜನಪರ ಕಾಳಜಿಯುಳ್ಳವರಾಗಿದ್ದಾರೆ ಎಂದು ಹೊಗಳಿದ್ದಾರೆ.
ಕೇಂದ್ರ ಸರಕಾರದ ಆಧೀನದಲ್ಲಿರುವ ಐಟಿ, ಇಡಿ ಇಲಾಖೆಗಳು ಕೇವಲ ಕಾಂಗ್ರೆಸ್ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸುತ್ತಿವೆ. ಬಿಜೆಪಿ ಮುಖಂಡರು ಬಿಪಿಎಲ್ ಕಾರ್ಡ್ ಹೊಂದಿದವರೇ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ನಾಗರಾಜ್, ನಾನು ಒಂದು ರೂಪಾಯಿ ತೆರಿಗೆ ಕೂಡಾ ಮೋಸ ಮಾಡಿಲ್ಲ. ವಿಪಕ್ಷಗಳು ಅನಗತ್ಯವಾಗಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.