Select Your Language

Notifications

webdunia
webdunia
webdunia
webdunia

ಐಟಿ ಅಧಿಕಾರಿ ಮಗನನ್ನೇ ಕಿಡ್ನ್ಯಾಪ್ ಮಾಡಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ

ಐಟಿ ಅಧಿಕಾರಿ ಮಗನನ್ನೇ ಕಿಡ್ನ್ಯಾಪ್ ಮಾಡಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ
ಬೆಂಗಳೂರು , ಗುರುವಾರ, 14 ಸೆಪ್ಟಂಬರ್ 2017 (15:35 IST)
ದುಷ್ಕರ್ಮಿಗಳು ಐಟಿ ಅಧಿಕಾರಿ ಪುತ್ರನನ್ನೇ ಬಂಧಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಪಹರಣವಾದ ಹುಡುಗನ ಕೈಯಲ್ಲೇ ವಾಟ್ಸಾಪ್ ವಿಡಿಯೋ ಮಾಡಿಸಿ ಕಳುಹಿಸಿರುವ ದುಷ್ಕರ್ಮಿಗಳು 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಕೆಂಗೇರಿಯ ಉಳ್ಳಾಲದ ನಿರಂಜನ್ ಎಂಬುವವರ ಪುತ್ರ 19 ವರ್ಷದ ಶರತ್ ಅಪಹರಣಕ್ಕೀಡಾದ ಯುವಕ. 2 ದಿನಗಳ ಹಿಂದೆಯೇ ಈ ಅಪಹರಣ ಪ್ರಕರಣ ನಡೆದಿದೆ. ಮಾಧ್ಯಮಗಳಿಗೆ ಸಿಕ್ಕಿರುವ ವಿಡಿಯೋದಲ್ಲಿ ಮಾತನಾಡಿರುವ ಯುವಕ, ಇವರು ನನಗೆ ತುಂಬಾ ಟಾರ್ಚರ್ ಕೊಡುತ್ತಿದ್ದಾರೆ. ಅವರು ಕೇಳಿದಷ್ಟು ಅಡ್ಜೆಸ್ಟ್ ಮಾಡಿ ತಂದು ಕೊಡಿ ಎಂದು ಗೋಗರೆಯುತ್ತಾನೆ. ಪಕ್ಕದಲ್ಲಿರುವ ಅಪಹರಣಕಾರರು ಯುವಕನಿಗೆ ಹೇಳಿ ಕೊಡುತ್ತಿರುವುದು ಪತ್ತೆಯಾಗಿದೆ.

ಶರತ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದಾನೆ, ಹಣದ ಬೇಡಿಕೆ ಇಟ್ಟಿರುವ ವಾಟ್ಸಾಪ್ ವಿಡಿಯೋ ತಂದೆ ತಾಯಿ ಮತ್ತು ಸೋದರನಿಗೆ ಕಳುಹಿಸಲಾಗಿದ್ದು, ಜ್ಞಾನಭಾರತಿ ಭಾರತಿ ಠಾಣೆ ಪೊಲಿಸರು ವಾಟ್ಸಾಪ್ ವಿಡಿಯೋ ಮೂಲ ಆಧರಿಸಿ ಅಪಹರಣಕಾರರ ಪತ್ತೆಗೆ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಯ ಮಹತ್ವಾಕಾಂಕ್ಷಿ ಬುಲೆಟ್ ಟ್ರೇನ್ ವಿಶೇಷತೆಗಳೇನು ಗೊತಾ..? ಇಲ್ಲಿವೆ ನೋಡಿ