Select Your Language

Notifications

webdunia
webdunia
webdunia
webdunia

ಕುರುಬ ಹಾಗೂ ಮುಸ್ಲಿಂ ಸಮುದಾಯಗಳಿಗೆ ಸಚಿವ ಸ್ಥಾನ ದೊರಕದಿರುವುದು ಅತೃಪ್ತಿ ತಂದಿದೆ- ಎಚ್.ಎಂ.ರೇವಣ್ಣ

ಕುರುಬ ಹಾಗೂ ಮುಸ್ಲಿಂ ಸಮುದಾಯಗಳಿಗೆ ಸಚಿವ ಸ್ಥಾನ ದೊರಕದಿರುವುದು ಅತೃಪ್ತಿ ತಂದಿದೆ- ಎಚ್.ಎಂ.ರೇವಣ್ಣ
ಬೆಂಗಳೂರು , ಬುಧವಾರ, 6 ಜೂನ್ 2018 (14:43 IST)
ಬೆಂಗಳೂರು : ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು ಕುರುಬ ಸಮಾಜ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಪಟ್ಟ ದುಡಿದಿದ್ದಕ್ಕೆ ನೀಡಿದ ಅಗೌರವ ಇದು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


‘ನಿನ್ನೆ ರಾತ್ರಿಯವರೆಗೂ ಸಚಿವ ಪಟ್ಟಿಯಲ್ಲಿದ್ದ ಹೆಸರು ಮಧ್ಯರಾತ್ರಿ ವೇಳೆಗೆ ಬದಲಾಗಿದೆ. ಈ ಬೆಳವಣಿಗೆ ತಮಗೆ ಆಘಾತ ತಂದಿದೆ. ಕುರುಬ ಹಾಗೂ ಮುಸ್ಲಿಂ ಸಮುದಾಯ ಕಾಂಗ್ರೆಸ್‍ಗೆ 100ಕ್ಕೆ ನೂರರಷ್ಟು ಮತ ನೀಡಿದೆ. ಈ ಎರಡೂ ಸಮುದಾಯಗಳಿಗೆ ಸಚಿವ ಸ್ಥಾನ ದೊರಕದಿರುವುದು ಅತೃಪ್ತಿ ತಂದಿದೆ. ಎರಡೂ ಸಮಾಜಗಳನ್ನು ತುಳಿಯಲು ಕಾಣದ ಕೈಗಳು ಕೆಲಸ ಮಾಡಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಫಾ ವೈರಸ್‌ ಭೀತಿಗೆ ಕೇರಳದ ಆಮದನ್ನು ರದ್ದುಪಡಿಸಿದ ಸೌದಿ ಅರೇಬಿಯಾ