Webdunia - Bharat's app for daily news and videos

Install App

ರಾಜ್ಯದಲ್ಲಿ ಜನರಿಗೊಂದು ಸಿಎಂ ಸಿದ್ದರಾಮಯ್ಯಗೊಂದು ಕಾನೂನಿದೆಯಾ: ಎನ್ ರವಿಕುಮಾರ್

Krishnaveni K
ಶುಕ್ರವಾರ, 30 ಆಗಸ್ಟ್ 2024 (14:26 IST)
ಬೆಂಗಳೂರು: ಸಿದ್ದರಾಮಯ್ಯನವರು ಮುಡಾದ 14 ಸೈಟ್ ಪಡೆಯಬಾರದಿತ್ತು; ಆದರೂ ಪಡೆದಿದ್ದಾರೆ. ಸೈಟಿಗಿಂತ ಸಂವಿಧಾನ ದೊಡ್ಡದು. ಸಿದ್ದರಾಮಯ್ಯನವರು ಟೆಕ್ನಿಕಲ್ ಕಮಿಟಿ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ತನಿಖೆಯನ್ನು ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು.

2020ರಲ್ಲಿ ವಿಷಯ ಸಂಖ್ಯೆ 5ರಲ್ಲಿ ಶೇ 50: 50 ಅನುಪಾತದಲ್ಲಿ ನಿವೇಶನ ಕೊಡುವ ಬಗ್ಗೆ ಮತ್ತೆ ಮೂಡದಲ್ಲಿ ವಿಷಯವನ್ನು ಮಂಡಿಸಲಾಗಿತ್ತು. ವಿಸ್ತøತ ಚರ್ಚೆ ನಡೆದರೂ ಅದರ ಪರ ನಿರ್ಣಯ ಕೈಗೊಂಡಿಲ್ಲ. ಆ ಸಭೆಯಲ್ಲಿ ಚಯರ್‍ಮನ್ ರಾಜೀವ್, ಮರಿತಿಬ್ಬೇಗೌಡ, ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಯತೀಂದ್ರ, ಆಯುಕ್ತ ನಟೇಶ್ ಮೊದಲಾದವರು ಇದ್ದರು ಎಂದು ಗಮನ ಸೆಳೆದರು. ನಡೆದ ಚರ್ಚೆಯ ಕುರಿತು ಆಡಿಯೋವನ್ನು ಮುಂದಿಟ್ಟರು. ನಿರ್ಣಯ ಆಗಿದೆ ಎಂದು ರಾಜೀವ್ ಮತ್ತು ಆಯುಕ್ತರು ಹೇಳಿದ್ದರಿಂದ 14 ಸೈಟ್ ಕೊಡಲಾಗಿತ್ತು ಎಂದು ಆಕ್ಷೇಪಿಸಿದರು.

20-11-2020ರ ನಿರ್ಣಯದ ಆಧಾರದಲ್ಲೇ ಈ ನಿವೇಶನಗಳನ್ನು ಕೊಡಲಾಗಿದೆ. 14 ನಿವೇಶನ ನೀಡುವಿಕೆ ಅಕ್ರಮ ಎಂದು ಬಿಜೆಪಿ ತಿಳಿಸಿದಾಗ ಸಿದ್ದರಾಮಯ್ಯನವರು ನಿವೇಶನಗಳನ್ನು ವಾಪಸ್ ಪಡೆಯಲು ತಿಳಿಸಿದ್ದಾರೆ. ಮಾರುಕಟ್ಟೆ ದರ 62 ಕೋಟಿ ಕೊಡಿ ಎಂದು ಸಿದ್ದರಾಮಯ್ಯನವರು ಕೇಳಿದ್ದಾರೆ. ಅವತ್ತು 14 ಸೈಟ್‍ಗಳನ್ನು ಯಾರು ಅಕ್ರಮವಾಗಿ ಹಂಚಿದರೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.
 
ಸಿಎಂಗೆ ಒಂದು ಕಾನೂನು, ಜನರಿಗೆ ಇನ್ನೊಂದು ಕಾನೂನಿದೆಯೇ?
ವರದಿಯಂತೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ಸಿನವರಿಂದ ಅಥವಾ ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಯವರು ನಿವೇಶನ ವಾಪಸ್ ಕೊಡಬೇಕಿತ್ತು. ಸಿದ್ದರಾಮಯ್ಯನವರಿಗೆ ಒಂದು ಕಾನೂನು; ರಾಜ್ಯದ ಉಳಿದವರಿಗೆ ಇನ್ನೊಂದು ಕಾನೂನಿದೆಯೇ? ಮೈಸೂರಿನಲ್ಲಿ ಅರ್ಜಿ ಹಾಕಿದ 87 ಸಾವಿರ ಜನರಿಗೆ ಸೈಟ್ ಸಿಕ್ಕಿಲ್ಲ. ಅವರಿಗೆ ಒಂದು ಕಾನೂನು,
ನಿಮಗೊಂದು ಕಾನೂನಿದೆಯೇ ಎಂದು ರವಿಕುಮಾರ್ ಪ್ರಶ್ನಿಸಿದರು.
ಎರಡನೇ ಅಂಬೇಡ್ಕರ್ ತಾವೆಂದು ಹೇಳಿಕೊಳ್ಳುವ, ಎರಡನೇ ದೇವರಾಜ ಅರಸು ತಾವೆನ್ನುವ ಸಿದ್ದರಾಮಯ್ಯನವರು 14 ಸೈಟ್ ವಾಪಸ್ ಕೊಡುತ್ತಾರಾ? ತಪ್ಪು ಮಾಡಿದ ಯಾರಿಗಾದರೂ ಶಿಕ್ಷೆ ಕೊಡಲು ಇದನ್ನು ಸಿಬಿಐಗೆ ಒಪ್ಪಿಸಿ ಎಂದು ಒತ್ತಾಯಿಸಿದರು. ಸದನದಲ್ಲೂ ಸಿಎಂ ಚರ್ಚೆ ಮಾಡದೆ ಪಲಾಯನ ಮಾಡಿದ್ದರು. ಹೊರಗಡೆ, ಬಿಜೆಪಿಯವರು ಹೀಗೆಲ್ಲ ಹೇಳುತ್ತಾರೆ; ಅವರಿಗೆ ಬೇರೆ ಕೆಲಸ ಇಲ್ಲ ಎನ್ನುತ್ತೀರಿ ಎಂದು ಟೀಕಿಸಿದರು.
 
ಇಂಥ ಅನೇಕ ಅಕ್ರಮಗಳು ನಡೆದಿರುವುದು ಕಂಡುಬಂದಿದೆ. ಬಿಜೆಪಿ ಸರಕಾರ ಇದ್ದಾಗ, ಬೊಮ್ಮಾಯಿಯವರು ಸಿಎಂ ಇದ್ದ ಸಂದರ್ಭದಲ್ಲಿ ಈ ಥರದ ಪ್ರಕರಣ ತನಿಖೆಗೆ ತಾಂತ್ರಿಕ ಪರಿಣತರ (ತಜ್ಞರ) ಸಮಿತಿ ರಚಿಸಲಾಗಿತ್ತು. ಅದರ ವರದಿಯನ್ನು 3-11-2023ರಲ್ಲಿ ಸರಕಾರಕ್ಕೆ ಸಲ್ಲಿಸಲಾಗಿದೆ. ಮೂಡದಲ್ಲಿ ಆದ ಅಕ್ರಮಗಳ ಬಗ್ಗೆ ತಾಂತ್ರಿಕ ಪರಿಣತರ (ತಜ್ಞರ) ಸಮಿತಿ ವರದಿಯಲ್ಲಿ ಇದೆ. ಅದನ್ನು ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.

ಕರ್ನಾಟಕದ ಸಾಂಸ್ಕøತಿಕ ರಾಜಧಾನಿ, ವಿಶ್ವವಿಖ್ಯಾತ ದಸರಾ ನಡೆಯುವ ಮೈಸೂರಿನಲ್ಲಿ ಮೂಡ ನಿವೇಶನಗಳ ಹಗರಣ ಇದೀಗ ಬಹುಚರ್ಚಿತ ವಿಷಯ. ನಗರದ ಮಧ್ಯಮ ವರ್ಗ, ಬಡವರಿಗೆ ಬಹಳ ಸರಳವಾಗಿ ಸೈಟ್ ಸಿಗಬೇಕೆಂದು ಇಂಥ ಪ್ರಾಧಿಕಾರ ರಚಿಸಲಾಗಿದೆ ಎಂದರು.

2009ರಲ್ಲಿ 60-40 ಸೈಟ್ ಹಂಚಿಕೆ ಅನುಪಾತ ಇತ್ತು. ಈ ನೀತಿಗೆ ಜಮೀನು ನೀಡಲು ರೈತರು ಮುಂದೆ ಬರಲಿಲ್ಲ; ಅಧಿಕಾರಿಗಳೂ ಉತ್ಸಾಹ ತೋರಿಸಲಿಲ್ಲ. 2015ರಲ್ಲಿ ಇದನ್ನು 50: 50 ಅನುಪಾತ ಮಾಡಲು ಮುಂದಾದರು. 2009ರ ನಂತರ ಮಾಡಿದ ಬಡಾವಣೆಗೆ ಈ ನೀತಿ ಅನ್ವಯಗೊಳಿಸಲಾಯಿತು ಎಂದು ವಿವರಿಸಿದರು.
 
ಮುಖ್ಯಮಂತ್ರಿಗಳು ಪ್ರಶ್ನಾತೀತರೇ...?
ಪಾರ್ವತಿಯವರ ಸೈಟಿನ ನಂಬರ್ 1,501 ಕ್ರಮಸಂಖ್ಯೆ ಎಂದಿದೆ. ಇದುವರೆಗೆ 13,255ರವರೆಗೆ ಸೈಟ್ ವಿತರಿಸಲಾಗಿದೆ. 1,501ರಿಂದ ಇಲ್ಲಿನ ವರೆಗಿನ (ಈಗ 14,842) ಸೈಟ್ ವಿತರಣೆ ಅಕ್ರಮ ಎಂದ ಅವರು, ತನಿಖೆ ನಡೆಸಲಿ; ನೀವೇನು ತನಿಖೆಗೆ ಅತೀತರೇ? ನೀವು ಹೇಳಿದ್ದೇ ವೇದವಾಕ್ಯವೇ? ನೀವು ಪ್ರಶ್ನಾತೀತರೇ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.

ಬಿಜೆಪಿ ಸರಕಾರವೇ ನಮಗೆ 14 ನಿವೇಶನ ಕೊಟ್ಟಿತ್ತೆಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಆದೇಶ ರದ್ದಾಗಿದ್ದರೂ ಇವರಿಗೆ ಹೇಗೆ 14 ಸೈಟ್ ಸಿಕ್ಕಿದೆ? ಈ ವಿಷಯ ಗಂಭೀರವಾಗಿದೆ ಎಂದು ವಿಶ್ಲೇಷಿಸಿದರು.
 
14-9-2020ರ ಮೂಡದ ಸಭೆಯಲ್ಲಿ ನಿಯಮಬಾಹಿರವಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಬಡಾವಣೆ ನಿರ್ಮಾಣಕ್ಕೆ ಬಳಸಿಕೊಂಡಿದ್ದರೆ, ಈ ಜಮೀನುಗಳಿಗೆ ಪರಿಹಾರ ನೀಡದೆ ಇದ್ದರೆ ಶೇ 50: 50 ಅನುಪಾತದಲ್ಲಿ ಪರಿಹಾರ ರೂಪದಲ್ಲಿ ನಿವೇಶನ ನೀಡುವ ನಿರ್ಣಯ ಕೈಗೊಂಡಿದ್ದರು. ಈ ನಿರ್ಣಯಕ್ಕೆ ಸರಕಾರದ ಅನುಮತಿ ಲಭಿಸಿರಲಿಲ್ಲ. ಇದು ನಿಯಮಬಾಹಿರವೂ ಆಗಿರುವ ಕಾರಣ ಮುಂದೆ 27-10-2023ರಂದು ಈ ನಿರ್ಣಯವನ್ನು ರದ್ದು ಮಾಡಿತ್ತು ಎಂದು ತಿಳಿಸಿದರು. ಆದೇಶಸಂಖ್ಯೆಯೊಂದಿಗೆ ವಿವರವನ್ನೂ ನೀಡಿದರು. ಇದು ಸಿದ್ದರಾಮಯ್ಯನವರಿಗೂ, ರಾಜ್ಯದ ಎಲ್ಲರಿಗೂ ಅನ್ವಯಿಸುತ್ತದೆ ಎಂದು ತಿಳಿಸಿದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments