Publish Date: Tue, 12 May 2020 (20:22 IST)
Updated Date: Tue, 12 May 2020 (20:23 IST)
ಬೆಂಗಳೂರಿನಿಂದ ಬಸ್ ನಲ್ಲಿ ಬಂದ ಪ್ರಯಾಣಿಕನೊಬ್ಬನಲ್ಲಿ ಕೊರೊನಾ ದೃಢಪಟ್ಟಿದೆ. ರೋಗಿಯೊಂದಿಗೆ ಬಂದ ಮೂವರು ಸಹ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಂಗಳೂರಿನಿಂದ ಸಿಂಧನೂರಿಗೆ ಬಂದಿದ್ದ ಕಾರ್ಮಿಕರಲ್ಲಿ ಕೊರೋನಾ ಭೀತಿ ಹಿನ್ನಲೆಯಲ್ಲಿ ಮೂವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಯ ಐಸೋಲೇಶನಲ್ಲಿ ಇಡಲಾಗಿದೆ. ಅವರ ಕುಟುಂಬದ 22 ಜನರನ್ನು ಸಿಂಧನೂರಿನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಮೇ 5 ರಂದು ಬೆಂಗಳೂರಿನಿಂದ ಸಿಂಧನೂರಿಗೆ ಸಾರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ. ಇವರೊಟ್ಟಿಗೆ ಕಂಪ್ಲಿಯ ವ್ಯಕ್ತಿಯೋರ್ವನು ಪ್ರಯಾಣ ಮಾಡಿದ್ದು, ಈತನಿಗೆ ಕೋವಿಡ್-19 ಇರುವುದು ದೃಢವಾಗಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಂಧನೂರಿಗೆ ಸೇರಿದ ಈ ಮೂವರನ್ನು ಚಿಕಿತ್ಸೆಗೆ ರಾಯಚೂರಿಗೆ ರವಾನಿಸಲಾಗಿದೆ. ಇವರ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆಗೆ ಕಳುಹಿಸಲಾಗಿದೆ.