ಇನ್ನೊಂದು ಪಕ್ಷವನ್ನು ತೆಗಳಿದವರು, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ, ಟೀಕೆ ಮಾಡಿದ್ದ ಪಕ್ಷದ ಸಾಂಗತ್ಯವನ್ನು ಬೆಳೆಸಿದಂತಹ ಸಾಕಷ್ಟು ನಿದರ್ಶನಗಳು ದೇಶದ ಹಲವು ರಾಜ್ಯಗಳ ರಾಜಕಾರಣದಲ್ಲಿ ನಡೆದು ಹೋಗಿರೋದುಂಟು.
ಅದು ಇದು, ರಾಜಕೀಯ ಮತ್ತೊಂದು, ಮೊಗದೊಂದು ಅದನ್ನು ಇಲ್ಲಿಗೆ ಬಿಡೋಣ, ಸದ್ಯ ಈಗ ದೇಶದ ರಾಜಕಾರಣದ ವಿದ್ಯಮಾನಗಳ ಬಗ್ಗೆ ಮಾತನಾಡುವ ಗೋಜಿಗೆ ಹೋಗೋದು ಬೇಡ. ರಾಜ್ಯ ರಾಜಕೀಯದಲ್ಲಿ ಏನಾಗ್ತಿದೆ, ಆಡಳಿತ ಪಕ್ಷ ಕಾಂಗ್ರೆಸ್, ಮತ್ತು ನಿರ್ಧರಿತ ಅಧಿಕೃತವಾದ ವಿರೋಧ ಪಕ್ಷ ಅಂತಾನೂ ಇನ್ನೂ ಗುರ್ತಿಸಿಕೊಳ್ಳದ ಬಿಜೆಪಿ, ಮತ್ತು ಆ ಕಡೆ ಅಸೆಂಬ್ಲಿ ಚುನಾವಣೆಯಲ್ಲಿ ಪಂಚರತ್ನ ಯಾತ್ರೆ, ಈ ಯಾತ್ರೆ ಅಂತ ರಾಜ್ಯಾದ್ಯಂತ ಒಂದು ಸುತ್ತು ಬಂದು, ಜೆಡಿಎಸ್‌ನನ್ನು ಕೇವಲ ೧೯ ಸೀಟ್‌ಗೆ ತಂದು ಕೂರಿಸಿದ್ದ ಕುಮಾರಣ್ಣನ ಬಿಂಕದ ರಾಜಕಾರಣ, ಹೀಗೆ ಇವೆಲ್ಲದರ ನಡುವೆ ಆ ಕಡೆ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸ್ತಾ ಇರುವ ಬೆಳಗಾವಿ ರಾಜಕಾರಣದ ಬಗ್ಗೆ ಅಗತ್ಯವಾಗಿ ಚರ್ಚೆ ಮಾಡಲೇಬೇಕಾದ ಸಂದರ್ಭ ಎದುರಾಗಿದೆ.
ಒನ್ಸ್ ಅಪ್ ಆನ್ ಏ ಟೈಂ ಅನ್ನೋದಕ್ಕಿಂತ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದಕ್ಕೆ ಮತ್ತು ೨೦೧೯ರಲ್ಲಿ ಮೈತ್ರಿ ಸರ್ಕಾರದ ಮಹಾಪತನಕ್ಕೆ ಕಾರಣವಾಗಿದ್ದ ಬೆಳಗಾವಿ ರಾಜಕಾರಣ, ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೇ ಸದ್ದು ಮಾಡ್ತಿದೆ. ಅವತ್ತಿನ ದಿನದಲ್ಲಿ ಡಿಕೆಶಿ ವಿರುದ್ಧ ಜಿದ್ದಿಗೆ ಬಿದ್ದು, ಇದೇ ಕುಮಾರಸ್ವಾಮಿ ನೇತೃತ್ವದ ಜಂಟಿ ಸರ್ಕಾರವನ್ನು ಕೆಡವಿದ್ದ, ಬೆಳಗಾವಿಯ ಗೋಕಾಕ್ ಸಾಹುಕಾರ ಮತ್ತೇ ರಾಜಕೀಯವಾಗಿ ಕಂಪನವನ್ನು ಸೃಷ್ಟಿಸುವ ಧಾವಂತಕ್ಕೆ ಇಳಿದು ಬಿಟ್ಟರಾ ಎಂಬ ಡೌಟ್ ಶುರುವಾಗಿ ಬಿಟ್ಟಿದೆ.
ರಮೇಶ್ ಜಾರಕಿಹೊಳಿ ಬೆಳಗಾವಿ ರಾಜಕಾರಣದಲ್ಲಿ ಜಿದ್ದಿನ, ಸೇಡಿನ ರಾಜಕಾರಣಕ್ಕೆ ಬಿದ್ದು, ಈ ಹಿಂದೆ ಏನೆಲ್ಲಾ ಮಾಡಿದ್ದರೂ ಅನ್ನೋದು ರಾಜ್ಯದ ಕಣ್ಣ ಮುಂದಿದೆ... ಆದರೆ ಇವಾಗ ಮತ್ತೆ ಸಹೋದರ ಸತೀಶ್ ಜಾರಕಿಹೊಳಿಯ ಅತಂತ್ರ ಸನ್ನಿವೇಶವನ್ನೇ ಅಸ್ತçವಾಗಿ ಮಾಡಿಕೊಂಡು, ಬಿಜೆಪಿಯಲ್ಲಿ ಇದ್ದುಕೊಂಡೇ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸುವ ತಯಾರಿ ಮಾಡಿಕೊಂಡರಾ ಅನ್ನುವ ಟಾಕ್ ಜೋರಾಗಿಯೇ ಕೇಳಿ ಬರ್ತಾ ಇದೆ.
ಸಾಹುಕಾರ್ ಮತ್ತೇ ಅಖಾಡಕ್ಕೆ ಇಳಿದು ಬಿಟ್ಟರಾ ಅನ್ನೋದು ಸದ್ಯದ ಹಾಟ್ ಟಾಪಿಕ್... ಈಗಾಗಲೇ ಕಾಂಗ್ರೆಸ್‌ನಲ್ಲಿ ಇದೇ ಬೆಳಗಾವಿ ರಾಜಕಾರಣದಲ್ಲಿ ಆಗ್ತಾ ಇರುವ ವೈಯಕ್ತಿಕ ರಾಜಕೀಯ ಜಿದ್ದಾಜಿದ್ದಿನಿಂದ, ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿಯ ನಡುವೆ ಅದೆಂಥದ್ದು ಸರಿಯಿಲ್ಲವಾ ಅನ್ನುವ ಮಾತು ಅಕ್ಷರಶಃ ನಿಜವೇ ಎನ್ನಲಾಗ್ತಿದೆ. ಸೇಡಿನ ರಾಜಕಾರಣ ಛಾಯೆ ಬೆಳಗಾವಿ ರಾಜಕೀಯ ಅಖಾಡದಲ್ಲಿ ನಿಧಾನವಾಗಿ ಬೇರೂರುತ್ತಿದೆ. ಇದರ ತೂಗುಯ್ಯಾಲೆ ನೇರವಾಗಿ ಗ್ಯಾರಂಟಿ ಸರ್ಕಾರದ ಮೇಲೆ ನೇತಾಡುವ ಪ್ರಸಂಗ ಎದುರಾಗಿದೆ...
ರಮೇಶ್ ಜಾರಕಿಹೊಳಿಯ ಕುತಂತ್ರ ರಾಜಕಾರಣದಿಂದಲೇ, ಈ ಹಿಂದೆಯೇ ಜೋಡೆತ್ತುಗಳ ಮಧ್ಯೆ ದೊಡ್ಡ ಮನಸ್ತಾಪ ಶರುವಾಗಿತ್ತು. ಆದರೆ ಇವಾಗ ಮತ್ತೆ ರಮೇಶ್ ಜಾರಕಿಹೊಳಿಯ ಹೊಸ ನಡೆಯೂ, ರಾಜ್ಯ ರಾಜಕೀಯದಲ್ಲಿ ಮತ್ತೆನಾದರೂ, ರಾಜಕೀಯವಾಗಿ ಸರ್ಕಾರಕ್ಕೆ ಕಂಟಕ ಎದುರಾಗಿ ಬಿಡುವ ವಾತಾವರಣ ನಿರ್ಮಾಣವಾಗಬಹುದಾ...? ಅಥವಾ ಬೆಳಗಾವಿ ರಾಜಕಾರಣದಲ್ಲಿ ಈಗ ಮಿನಿಸ್ಟರ್‌ಗಳ ಮಧ್ಯೆಯೇ ಒಳಗೊಳಗೆ ಹುಟ್ಟಿಕೊಂಡಾ ವೈಮನಸ್ಸು, ಸಿದ್ದು ಸರ್ಕಾರದ ತಲೆನೋವಿಗೆ ಕಾರಣವಾಗಬಹುದು..? ಇಲ್ಲ ಇದೇ ಸಂದರ್ಭವನ್ನು ರಮೇಶ್ ಜಾರಕಿಹೊಳಿ ಬಳಕೆ ಮಾಡಿಕೊಂಡು, ಸರ್ಕಾರವನ್ನು ದಾರಿತಪ್ಪಿಸುವ ಒಂದಷ್ಟು ಕಾರ್ಯತಂತ್ರಗಳ ಮೊರೆ ಹೋಗಬಹುದಾ..? ಮತ್ತು ಈಗಾಗಲೇ ಅದಕ್ಕೆ ಬೇಕಾದ ಅಸಲಿ ರಾಜಕೀಯ ರಣತಂತ್ರವನ್ನು ಹೆಣೆದೇ ಅಖಾಡ ಸಿದ್ಧ ಮಾಡಿದ್ರಾ..? ನಾಟ್‌ಶ್ಯೂರ್.....?
ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಅದರಲ್ಲೂ ಮುಖ್ಯವಾಗಿ ಬೆಳಗಾವಿ ರಾಜಕಾರಣದಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ರಾಜಕೀಯವಾಗಿ ಆಗ್ತಾ ಇರುವ ಪಲ್ಲಟಗಳನ್ನು ನೋಡ್ತಾ ಹೋದ್ರೆ, ಯಾವುದು ಸರಿಯಿಲ್ಲ, ಏನೇನು ಸರಿಯಿಲ್ಲ ಅನ್ನೋದು ಪಕ್ಕಾ ಕನ್ಫರ್ಮ್ ಆಗಿ ಬಿಟ್ಟದೆ.. ನೇರನೇರವಾಗಿ ಲಕ್ಷಿö್ಮ ಹೆಬ್ಬಾಳ್ಕರ್, ಮತ್ತು ಸತೀಶ್‌ಜಾರಕಿಹೊಳಿಯವರು ಮಾತಿನಲ್ಲೇ ವಾಗ್ಬಣಗಳನ್ನು ಬಿಡೋದನ್ನು ಗಮನಿಸಿದ್ರೆ, ಹಾಗೇ ನೋಡಿದರೇ ವೈಯಕ್ತಿಕ ರಾಜಕೀಯ ಸಂಘರ್ಷ ತಾರಕಕ್ಕೆ ಏರಿರೋದು ಬಹುತೇಕ ನಿಕಿಯಾಗಿದೆ. ಆದರೆ ಇವಾಗ ಸಹೋದರ ಸತೀಶ್‌ಜಾರಕಿಹೊಳಿಯ ಬೆನ್ನಿಗೆ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ನಿಂತು ಬಿಟಿದ್ದಾರೆ ಅನ್ನೋದು ಈಗಾಗ್ತಿರುವ ಘಟನೆಗಳನ್ನು ನೋಡದರೇನೆ, ಎಂತವರಿಗೂ ಗೊತ್ತಾಗಿ ಬಿಡುತ್ತೆ...
ಸದ್ಯ ಇವಾಗ ಬೆಳಗಾವಿಯಲ್ಲಿ, ಪರಸ್ಪರ ವೈಯಕ್ತಿಕ ಹಿತಾಸಕ್ತಿಯ ಕಿತ್ತಾಟಗಳಿಂದರೇ, ಸಿದ್ದು ಸರ್ಕಾರಕ್ಕೆ ಮುಂದೇ ಬರುವ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಪೆಟ್ಟು ಬೀಳಬಹುದು ಅನ್ನುವ ಚರ್ಚೆ ಎದ್ದಿದೆ. ಬೆಳಗಾವಿಯಲ್ಲಿ ಎದ್ದಿರುವ ಜಿದ್ದಿನ ರಾಜಕಾರಣವೇ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಲಾಭವಾಗಬಹುದಾ, ಇದೇ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ಗೊಂದಲವನ್ನು ಸೃಷ್ಟಿಸೋದಕ್ಕೆನೆ ಗೋಕಾಕ್ ಸಾಹುಕಾರರನ್ನ ಬಿಜೆಪಿಯೇ ಮುನ್ನಲೆಗೆ ತಂದು, ರಾಜಕೀಯವಾಗಿ ಗೇಮ್‌ಪ್ಲಾನ್ ಮಾಡಿದ್ಯಾ..? ಬಟ್ ನಾಟ್‌ಶ್ಯೂರ್...!???
ಯೆಸ್, ಕಳೆದೆರಡು ತಿಂಗಳಿAದ ಸೈಲೆಂಟ್ ಆಗಿದ್ದ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ರಾಜಕೀಯ ಬದ್ಧವೈರಿ ಲಕ್ಷ್ಮಣ್ ಸವದಿ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾಗಿದೆ. ಅಲ್ಲಿಗೆ ಬಿಜೆಪಿ ಸರ್ಕಾರ ಹೋದಾಗಿನಿಂದ, ಫುಲ್ ಸೈಲೆಂಟ್ ಆಗಿದ್ದ ಬೆಳಗಾವಿಯ ಗೊಕಾಕ್ ಶಾಸಕ, ಮಾಜಿ ಮಿನಿಸ್ಠರ್ ಮಿಸ್ಟರ್ ರಮೇಶ್ ಜಾರಕಿಹೊಳಿ ಇದೀಗ ಇದೇ ಬೆಳಗಾವಿ ರಾಜಕಾರಣದಲ್ಲಿ ಹೊಸ ವರಸೆ ಆರಂಭಿಸಿದ್ರಾ...?
ಹೌದು ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿ, ಅತ್ಯಂತ ಹೀನಾಯವಾಗಿ ಸೋತು ಹೋಗಿದ್ದೆ, ರಮೇಶ್ ಜಾರಕಿಹೊಳಿಯ ಗತ್ತು ಬಹುತೇಕ ಕಡಿಮೆ ಆಗಿ ಬಿಟ್ಟಿತ್ತು.. ಅಲ್ಲೋಮ್ಮೆ ಇಲ್ಲೋಮ್ಮೆ, ಎಷ್ಟು ಬೇಕೋ ಅಷ್ಟೇ ಮಾತಾನಾಡ್ತಿದ್ದ ರಮೇಶ್‌ಜಾರಕಿಹೊಳಿ ಬೆಳಗಾವಿಯ ರಾಜಕೀಯದಲ್ಲಿ ಮತ್ತೇ ಆಕ್ಟಿವ್ ಆಗಿ ತಲ್ಲಣ ಸೃಷ್ಟಿಸಿದ್ದಾರೆ. ತಮ್ಮ ರಾಜಕೀಯ ಬದ್ಧ ವೈರಿಯಾದ ಸವದಿ ಕ್ಷೇತ್ರದಲ್ಲಿ ಶಕ್ತಿಪ್ರದರ್ಶನ ಮಾಡಿ ಸಂಚಲನವನ್ನು ಸೃಷ್ಟಿಸಿದ್ದಾರೆ.ಹಾಗಾದ್ರೆ ಬೆಳಗಾವಿಯ ರಾಜಕಾರಣ ಮತ್ತೇ ರಾಜ್ಯ ರಾಜಕೀಯದಲ್ಲಿ ಬೇರೆಯದ್ದೇ ರೀತಿಯಲ್ಲಿ ಕಂಪನವನ್ನು ಸೃಷ್ಟಿಸುತ್ತಾ..? ಅಥವಾ ಅಲ್ಲಿಂದಲ್ಲಿಗೆ ಸ್ಟಾಪ್ ಆಗುತ್ತಾ ಕಾದು ನೋಡಬೇಕು..?