Publish Date: Mon, 09 Oct 2017 (13:44 IST)
Updated Date: Mon, 09 Oct 2017 (13:47 IST)
ಬಿಎಸ್‌ವೈ-ಅನಂತ್ ಕುಮಾರ್ ಆಡಿಯೋ ಸಂಭಾಷಣೆ ಸಾಬೀತು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಡಿಯಲ್ಲಿರುವುದು ನಮ್ಮ ಧ್ವನಿ ಅಲ್ಲ ಎಂದು ನಾವೆಂದು ಹೇಳಿಲ್ಲ. ನಮ್ಮ ಮೇಲೆ ಎಷ್ಟೇ ಎಫ್‍ಐಆರ್ ದಾಖಲಿಸಿದರು ಹೆದರೊಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸಿದ್ದಪಡಿಸಿದ ಸಿಡಿಯಲ್ಲಿರುವುದು ನಮ್ಮ ಧ್ವನಿಯೇ. ಆದರೆ, ಸಿಡಿಯಲ್ಲಿರುವ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿಡಿ ಇಟ್ಕೊಂಡು ಏನೋ ಸಾಧನೆ ಮಾಡಿದವರಂತೆ ಸರಕಾರ ಬೀಗುತ್ತಿದೆ. ಇಂತಹ ದ್ವೇಷದ ರಾಜಕಾರಣದಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಸಿಡಿಯನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸುವ ಅಗತ್ಯವಿರಲಿಲ್ಲ. ಸಿಡಿಯಲ್ಲಿರುವುದು ನಮ್ಮ ಧ್ವನಿಯೆಂದು ಬಹಿರಂಗವಾಗಿ ಹೇಳಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.