Webdunia - Bharat's app for daily news and videos

Install App

ಮುಸ್ಲಿಂ ಮಹಿಳೆಯು ಅನ್ಯ ಕೋಮಿನ ವ್ಯಕ್ತಿಯೊಂದಿಗೆ ಸಂಚರಿಸುವುದು ಅಪರಾಧವೇ?

Webdunia
ಭಾನುವಾರ, 19 ಸೆಪ್ಟಂಬರ್ 2021 (20:10 IST)
ಭಾರತ ಸರ್ಕಾರವು ಸಮಾನತೆ, ಸ್ವಾತಂತ್ರ್ಯ ಹಕ್ಕು ನೀಡಿದ್ದರೂ, ಕೆಲ ಮುಸ್ಲಿಂಮರು ತಾಲಿಬಾನ್ ಸಂಸ್ಕೃತಿ ಅನುಸರಿಸುತ್ತಿದ್ದಾರೆ. ಮುಸ್ಲಿಂ ಮಹಿಳೆಯು ಅನ್ಯ ಕೋಮಿನ ವ್ಯಕ್ತಿಯೊಂದಿಗೆ ಸಂಚರಿಸುವುದು ಅಪರಾಧವೇ? ಮುಸ್ಲಿಂಮರು ನಮ್ಮ ಸಂವಿಧಾನದಡಿ ಬದುಕುತ್ತಾರಾ  ಇಲ್ಲವೇ ತಾಲಿಬಾನ್ ಆಳ್ವಿಕೆಗೆ ಒಳಪಡುತ್ತಾರೆ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.
ಕೆಲ ಪುಂಡರು, ಮುಸ್ಲಿಂ ಮಹಿಳೆಗೆ ಈ ಜಗತ್ತಲ್ಲಿ ಏನಾಗುತ್ತಿದೆ ಅಂತ ಗೊತ್ತಿಲ್ವಾ? ಅನ್ಯಕೋಮಿನವರೊಂದಿಗೆ ಹೀಗೆ ಕೂತು ಹೋಗ್ತಿದ್ದೀಯ ಅಂತ ಗದರಿಸಿ, ಬೈಕ್​ನಿಂದ ಇಳಿಸಿ ಆಟೋದಲ್ಲಿ ಹೋಗು ಎಂದು ಕಳುಹಿಸಿದ ಪ್ರಸಂಗ ನಡೆದಿದೆ. ಆದರೆ, ಇದು ಅಫ್ಘಾನಿಸ್ತಾನದಲ್ಲಿ ನಡೆದಿಲ್ಲ. ಬದಲಾಗಿ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ!
ಇಷ್ಟು ದಿನ ಹಿಂದೂ ಸಂಘಟನೆಗಳನ್ನೇ ಟಾರ್ಗೆಟ್ ಮಾಡಿದ್ದ ಕೆಲ ಮುಸ್ಲಿಂ ಪುಂಡರು, ಇದೀಗ ಬೈಕ್ ನಲ್ಲಿ ಮುಸ್ಲಿಂ ಯುವತಿಯರಿಗೆ ಡ್ರಾಪ್ ನೋಡುವ ಹಿಂದೂ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಭಾರತ ಸಂವಿಧಾನದ ಲಾಭ ಪಡೆದು ತಾಲಿಬಾನ್ ನಂತೆ ವರ್ತಿಸುತ್ತಿದ್ದಾರೆ. ತಾಲಿಬಾನ್ ಸಂಸ್ಕೃತಿ ಪಸರಿಸುವವರು ಕಂಬಿ ಹಿಂದೆ ಹೋಗಿದ್ದು, ಇಂತವರಿಗೆ ಭಾರತ ಸಂವಿಧಾನವೇ ಉತ್ತರ ನೀಡಲಿದೆ.
ಇಬ್ಬರು ಆರೋಪಿಗಳ ಬಂಧನ:
ಸಹೋದ್ಯೋಗಿ ‌ಯುವತಿಯನ್ನು ಮನೆಗೆ ಡ್ರಾಪ್ ಮಾಡುವ‌ ವೇಳೆ ಬೈಕ್ ಅಡ್ಡಗಟ್ಟಿ ನಡುರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ‌ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಹೊಸೂರು ರಸ್ತೆಯ ಡೇರಿ ವೃತ್ತದ ಬಳಿ ಶನಿವಾರ ರಾತ್ರಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದರನ್ವಯ‌ ದೂರು‌ ದಾಖಲಿಸಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.
ಬ್ಯಾಂಕ್​ವೊಂದರ ನೌಕರರಾದ ಮಹೇಶ್​ ತಮ್ಮ ಸಹೋದ್ಯೋಗಿ ಮುಸ್ಲಿಂ ಮಹಿಳೆಯೊಂದಿಗೆ ರಾತ್ರಿ‌ ಕೆಲಸ‌ ಮುಗಿಸಿ ಮನೆಗೆ ಹೊರಟಿದ್ದರು. ಅವರನ್ನು‌ ಹಿಂಬಾಲಿಸಿದ್ದ ಗುಂಪು, ಬೈಕ್‌ ಅಡ್ಡಗಟ್ಟಿ ಗಲಾಟೆ ಮಾಡಿತ್ತು ಎಂದು ಪೊಲೀಸ್ ತಿಳಿಸಿದ್ದಾರೆ.
ನಾವಿಬ್ಬರು ಸಹೋದ್ಯೋಗಿಗಳು:
ನಮ್ಮ ಧರ್ಮದ ಯುವತಿಯನ್ನು ಬೈಕ್‌ನಲ್ಲಿ ಏಕೆ‌ ಕರೆದೊಯ್ಯುತ್ತಿದ್ದಿಯಾ ಎಂದು ಗುಂಪು‌ ಪ್ರಶ್ನಿಸಿತ್ತು. ನಾವಿಬ್ಬರು ಸಹೋದ್ಯೋಗಿಗಳು, ಹಲವು ಬಾರಿ ಬೈಕ್‌ನಲ್ಲಿ‌ ಹೋಗುತ್ತೇವೆ ಎಂದು ಯುವತಿ ಹಾಗೂ ಯುವಕ‌ ಹೇಳಿದ್ದರು. ಯುವತಿ ಜೊತೆಯೂ ವಾದ ಮಾಡಿದ್ದ ಆರೋಪಿಗಳು, ಕುಟುಂಬದವರ‌ ಮೊಬೈಲ್ ನಂಬರ್ ಪಡೆದು ಅವರ ಜೊತೆಯೂ‌ ಕೆಟ್ಟದಾಗಿ ‌ಮಾತನಾಡಿದ್ದರು. ಯುವಕನ ಮೇಲೆಯೂ‌ ಹಲ್ಲೆ‌ ಮಾಡಿದ್ದರು.
ಯುವತಿಯನ್ನು ಬೈಕ್‌ನಿಂದ‌ ಇಳಿಸಿ ಆಟೋದಲ್ಲಿ‌ ಮನೆಗೆ ಕಳುಹಿಸಿದ್ದ ಆರೋಪಿಗಳು, ಯುವತಿ ಜೊತೆ ಇನ್ನೊಮ್ಮೆ ಬೈಕ್‌ನಲ್ಲಿ ಹೋಗದಂತೆ ಎಚ್ಚರಿಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ