ಸಿದ್ದರಾಮಯ್ಯ ಎದುರೇ ಕೊಟ್ಟ ಮಾತು ನೆನಪಿಸಿದ ಡಿಕೆ ಶಿವಕುಮಾರ್: ಸಂಕ್ರಾಂತಿಗೆ ಕ್ರಾಂತಿಯಾಗುತ್ತಾ

Krishnaveni K
ಶುಕ್ರವಾರ, 9 ಜನವರಿ 2026 (09:06 IST)
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಮೊನ್ನೆ ಹಾವೇರಿಯಲ್ಲಿ ಸಿದ್ದರಾಮಯ್ಯನವರ ಎದುರೇ ಡಿಕೆ ಶಿವಕುಮಾರ್ ಕೊಟ್ಟ ಮಾತನ್ನು ನೆನಪಿಸಿದ್ದಾರೆ. ಇದನ್ನು ನೋಡಿದರೆ ಸಂಕ್ರಾಂತಿಗೆ ಕ್ರಾಂತಿಯಾಗುತ್ತಾ ಎಂಬ ಅನುಮಾನ ಮೂಡುತ್ತದೆ.

ಹೈಕಮಾಂಡ್ ನಾಯಕರ  ವಿದೇಶ ಪ್ರವಾಸ, ಅಡೆತಡೆಗಳಿಂದಾಗಿ ಅಧಿಕಾರ ಹಂಚಿಕೆ ವಿಚಾರ ಕೊಂಚ ತಣ್ಣಗಾಗಿದೆ. ಆದರೆ ಹೊಸ ವರ್ಷದಲ್ಲಿ ಈ ಬಗ್ಗೆ ಮಾತನಾಡೋಣ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಹೀಗಾಗಿ ಸಂಕ್ರಾಂತಿ ವೇಳೆಗೆ ಸಿಹಿ ಸುದ್ದಿ ಸಿಗಬಹುದೇ ಎಂದು ಡಿಕೆಶಿ ಬೆಂಬಲಿಗರು ಎದಿರು ನೋಡುತ್ತಿದ್ದಾರೆ.

ಡಿಕೆ ಶಿವಕುಮಾರ್ ಮೊನ್ನೆ ಹಾವೇರಿ ಕಾರ್ಯಕ್ರಮದಲ್ಲಿ ಮತ್ತೆ ಮಾತಿನ ಶಕ್ತಿ ಬಗ್ಗೆ ಸಿದ್ದರಾಮಯ್ಯ ಎದುರೇ ಮಾತನಾಡಿದ್ದಾರೆ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಮಾತು ಕೊಟ್ಟರೆ ಉಳಿಸಬೇಕು. ಅದೇ ಜಗತ್ತಿನ ದೊಡ್ಡ ಶಕ್ತಿ ಎಂದಿದ್ದರು. ಬಳಿಕ ಮೆತ್ತಗೆ ಈ ಮಾತು ಹೇಳಿದ್ದು ಕೇಂದ್ರ ಸರ್ಕಾರಕ್ಕೆ ಎಂದಿದ್ದಾರೆ.

ಆದರೆ ಡಿಕೆಶಿಯ ಈ ಹೇಳಿಕೆಗೆ ಸಿದ್ದರಾಮಯ್ಯರತ್ತ ಹೂಡಿದ ಬಾಣ ಎಂದು ಹೇಳಲಾಗುತ್ತಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿದೇಶದಿಂದ ಬಂದ ಬಳಿಕ ಅಧಿಕಾರ ಹಂಚಿಕೆ ವಿಚಾರ ಮಾತನಾಡೋಣ ಎಂದು ಡಿಕೆಶಿಗೆ ಸೂಚನೆ ಬಂದಿತ್ತು ಎನ್ನಲಾಗಿದೆ. ಹೀಗಾಗಿ ಈಗ ಕೊಟ್ಟ ಮಾತಿನ ಮಾತನಾಡುವ ಮೂಲಕ ಆ ವಿಚಾರವನ್ನು ಡಿಕೆಶಿ ನೆನಪಿಸಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಸದ್ಯಕ್ಕೆ ಸೋನಿಯಾ ಗಾಂಧಿ ಅನಾರೋಗ್ಯ ರಾಜ್ಯ ರಾಜಕೀಯ ಚರ್ಚೆಗೆ ಬ್ರೇಕ್ ಹಾಕಿದೆ. ಆದರೆ ಸಂಕ್ರಾಂತಿ ವೇಳೆಗೆ ಅವರು ಚೇತರಿಸಿಕೊಂಡು ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆ ಗರಿಗೆದರಲಿದೆ ಎನ್ನಲಾಗುತ್ತಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಎಪಿ ಆಡಳಿತವಿರುವ ಪಂಜಾಬ್ ನಲ್ಲೂ ಪೇಪರ್ ಲೀಕ್ ಆಗಿದೆ, ಏನಂತೀರಿ ಎಂದಿದ್ದಕ್ಕೆ ಅಭಿಜಿತ್ ದಿಪ್ಕೆ ಪ್ರತಿಕ್ರಿಯೆ ನೋಡಿ ಟ್ರೋಲ್

ಸರಿಯಾಗೇ ಆಯ್ತು.. ಅಪ್ಪನ ಔಷಧಿ ದುಡ್ಡಲ್ಲಿ ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಟ್ಟ ಯುವಕ: ಆದ್ರೆ ಆಕೆ ಮಾಡಿದ್ದೇನು Video

ಜೆನ್ ಜಿ ಯುವಕರ ಸೆಳೆಯಲು ಸಂಪುಟ ಸಹೋದ್ಯೋಗಿಗಳಿಗೆ ಕ್ರೇಜಿ ಐಡಿಯಾ ಕೊಟ್ಟ ಪ್ರಧಾನಿ ಮೋದಿ

ಮಹಿಳೆಯರು ಅಂತ ಸೀಟು ಬಿಟ್ಟುಕೊಡ್ಬೇಕಾ... ಮೆಟ್ರೋ ರೈಲಿನಲ್ಲಿ ನಡೆದ ಈ ಘಟನೆ ವಿಡಿಯೋ ತಪ್ಪದೇ ನೋಡಿ Video

Karnataka Weather: ಇಂದು ಯಾವ ಜಿಲ್ಲೆಗೆ ಭಾರೀ ಮಳೆ, ಯಾವ ಜಿಲ್ಲೆಗೆ ಸಾಧಾರಣ ಮಳೆ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments