Webdunia - Bharat's app for daily news and videos

Install App

‘ಮಧ್ಯಂತರ ಚುನಾವಣೆ ಬರೋಕೆ ಛಾನ್ಸ್ ಇಲ್ಲ’

Webdunia
ಗುರುವಾರ, 27 ಜೂನ್ 2019 (17:35 IST)
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ‌ ಮಧ್ಯಂತರ ಚುನಾವಣೆ ಬರುವುದಿಲ್ಲ ಹೀಗಂತ ಕೈ ಪಾಳೆಯದ ಹಿರಿಯ ರಾಜಕಾರಣಿ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಮಧ್ಯಂತರ ಚುನಾವಣೆ ಸಂಬಂಧ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ ಹೊರತು ಪಕ್ಷದ ಅಭಿಪ್ರಾಯವಲ್ಲ.‌ ಸಮ್ಮಿಶ್ರ ಸರಕಾರದಲ್ಲಿ ಸಾಕಷ್ಟು ಯೋಜನೆ ಹಾಕಿಕೊಂಡು ಅದರ ಅನುಷ್ಠಾನದತ್ತ ಸಾಗುತ್ತಿದ್ದೇವೆ. ‌ಜನರಿಗೆ ನೀಡಿದ ಭರವಸೆಯಂತೆ ಕೆಲಸ ಮಾಡುತ್ತಿದ್ದೇವೆ. ಹೀಗಂತ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಗ್ರಾಮವಾಸ್ತವ್ಯ ಬಗ್ಗೆ ಬಿಜೆಪಿ ಅವರ ಟೀಕೆ ಸರಿಯಲ್ಲ. ಸರಕಾರವನ್ನು ಟೀಕೆ ಮಾಡುವವರು ನೇರವಾಗಿ ವಿಧಾನಸೌಧ ಅಥವಾ ಬಿಜೆಪಿ ಕಚೇರಿಯಲ್ಲಿ ಮಾಡಬಹುದಿತ್ತು. ‌ಆದರೂ ಪಾದಯಾತ್ರೆ ಮಾಡುವ ಮೂಲಕ ಟೀಕೆ ಮಾಡುವುದು ಏನಿತ್ತು. ಸರಕಾರವೇ ಜನರ ಬಳಿ ಹೋಗುವುದನ್ನು ಟೀಕೆ ಮಾಡಿದರೆ ಹೇಗೆ? ಗಾಂಧೀಜಿ ಕೂಡ ಗ್ರಾಮವಾಸ್ತವ್ಯ ಮಾಡಿದ್ದರು. ಅವರನ್ನು ಇವರು ಪ್ರಶ್ನೆ ಮಾಡುತ್ತಾರಾ? ಎಂದು ಕೇಳಿದ್ರು.

ನಾನು ಚುನಾವಣೆ ಮುಂಚೆಯೂ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದೆ. ‌ಈಗಲೂ ನನ್ನ ಕ್ಷೇತ್ರದಲ್ಲಿ ಮಾಡುತ್ತಿದ್ದೇನೆ. ಈ ಶನಿವಾರ ಬೆಂಗಳೂರಿನಲ್ಲೂ ಜನಸಂಪರ್ಕ ಸಭೆ ಮಾಡಲಿದ್ದೇನೆ. ‌ಅಗತ್ಯ ಬಿದ್ದರೆ ರಾಜ್ಯಾದ್ಯಂತ ಮಾಡಲಾಗುವುದು ಎಂದ್ರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಿವಿಕೆ ನೇತೃತ್ವದ ಮೈತ್ರಿಗೆ 'ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿಕೂಟ' ಹೆಸರು

ಮಳೆಯ ಕೊರತೆ: ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣ

SIR, ರಾಜ್ಯದಲ್ಲಿ 43.81ಲಕ್ಷ ಮತದಾರರಿಗೆ ಚುನಾವಣಾ ನೋಟಿಸ್‌

BRICSನ ಕಳೆದ ಮೂರು ಸಭೆಗಳಿಂದ ಫಲಿತಾಂಶ ಕಂಡಿಲ್ಲ: ಚಿದಂಬರಂ ಅಸಮಾಧಾನ

ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಕಾಲ್ನಡಿಗೆ ಯಶಸ್ವಿ: ವಿಜಯೇಂದ್ರ

ಮುಂದಿನ ಸುದ್ದಿ
Show comments