Select Your Language

Notifications

webdunia
webdunia
webdunia
webdunia

ಕಬ್ಬನ್ ಪಾರ್ಕ್‌ಗೆ ₹5 ಕೋಟಿ ನೀಡುವ ಬದಲು ಮೊದಲು ರಸ್ತೆ ಗುಂಡಿ ಮುಚ್ಚಿ: ಡಿಕೆಶಿಗೆ ನೆಟ್ಟಿಗರು ತರಾಟೆ

DCM DK Shivkumar

Sampriya

ಬೆಂಗಳೂರು , ಸೋಮವಾರ, 27 ಅಕ್ಟೋಬರ್ 2025 (15:45 IST)
ರಾಜ್ಯದ ಹೆಗ್ಗುರುತಾಗಿರುವ ಕಬ್ಬನ್ ಪಾರ್ಕ್‌ ಹಾಗೂ ಲಾಲ್‌ಬಾಗ್ ಅಭಿವೃದ್ಧಿಗೆ  ₹5ಕೋಟಿ ಅನುದಾನವನ್ನು ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಈ ವಿಚಾರವಾಗಿ  ಡಿಕೆ ಶಿವಕುಮಾರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 

ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಎರಡೂ  ಕರ್ನಾಟಕ ಹಾಗೂ ದೇಶದ ಹೆಗ್ಗುರುತುಗಳು. ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬಿಡಿಎಯಿಂದ 5 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಕಬ್ಬನ್ ಪಾರ್ಕ್‌ ಉನ್ನತೀಕರಣಕ್ಕೆ ಹಣ ಬಿಡುಗಡೆ ಮಾಡುವಂತೆ ನಾಗರಿಕರು ಮನವಿ ಮಾಡಿದ್ದಾರೆ. ಅವರ ಮನವಿಯಂತೆ ಮಿಕ್ಕ ಅನುದಾನವನ್ನು  ತೋಟಗಾರಿಕೆ ಇಲಾಖೆಯಿಂದ ನೀಡುವಂತೆ ವ್ಯವಸ್ಥೆ ಮಾಡಲಾಗುವುದು. ಈ ಪಾರ್ಕ್‌ ಆವರಣದಲ್ಲಿ ಯಾವುದೇ ರೀತಿಯ ನಿರ್ಮಾಣ ಕೆಲಸಗಳಿಗೆ ಸರ್ಕಾರ ಆಸ್ಪದ ನೀಡುವುದಿಲ್ಲ. ಇವುಗಳ ರಕ್ಷಣೆಗೆ ಏನು ಕೆಲಸ ಮಾಡಬೇಕು ಅದನ್ನು ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ. 

ಈ ಪೋಸ್ಟ್‌ಗೆ ಬಗೆ ಬಗೆಯಾಗಿ ಕಮೆಂಟ್ ಬಂದಿದೆ. ಒಬ್ಬರು ಮೊದಲು ಬೆಂಗಳೂರು ರಸ್ತೆ ಗಳಿಗೆ ಗುಂಡಿಗಳು ಮುಚ್ಚುವ ಭಾಗ್ಯ ಕೊಡಿ ಆಮೇಲೆ ವಿಶ್ರಾಂತಿಗೆ ಪಾರ್ಕ್ ಗಳನ್ನು ಕಟ್ಟುವ ಕೆಲಸ ಮಾಡೋಣ.




Share this Story:

Follow Webdunia kannada

ಮುಂದಿನ ಸುದ್ದಿ

ಬುಡಕಟ್ಟು ಜನರಿಗೆ ಕಳಪೆ ಆಹಾರ, ಏನಾದ್ರೂ ಆದ್ರೆ ಯಾರು ಹೊಣೆ: ಬಿವೈ ವಿಜಯೇಂದ್ರ