Publish Date: Tue, 26 Jul 2016 (10:12 IST)
Updated Date: Tue, 26 Jul 2016 (11:08 IST)
ಮಹಿಳಾ ಪಿಎಸ್‌ಐ ರೂಪಾ ತಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಜಯನಗರ ಇನ್ಸ್‌ಪೆಕ್ಟರ್ ಸಂಜೀವ್ ಗೌಡ ಅವರನ್ನು ವರ್ಗಾವಣೆಗೊಳಿಸಿ ಡಿಜಿಪಿ ಆದೇಶ ಹೊರಡಿಸಿದ್ದಾರೆ.
ಒಟ್ಟು 52 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಡಿಜಿಪಿ ಅವರು ಆದೇಶ ಹೊರಡಿಸಿದ್ದು, ವಿಕಾಸಸೌಧದ ಭದ್ರತಾ ವಿಭಾಗಕ್ಕೆ ಸಂಜೀವ್ ಗೌಡ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ಪಿಎಸ್‌ಐ ರೂಪಾ ಆತ್ಮಹತ್ಯೆ ಯತ್ನಕ್ಕೆ ಸಂಜೀವ್ ಗೌಡ ನೀಡಿದ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿತ್ತು. ರೂಪಾ ತಂಬದ ಅವರು ಜುಲೈ 19 ರಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ