Webdunia - Bharat's app for daily news and videos

Install App

ಕೋಟ್ಯಂತರ ಮೌಲ್ಯದ ಐಶಾರಾಮಿ ಕಾರುಗಳು ಸಂಚರಿಸುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ

Webdunia
ಮಂಗಳವಾರ, 19 ಅಕ್ಟೋಬರ್ 2021 (22:21 IST)
ಬೆಂಗಳೂರು: ಮಹಾನಗರದಲ್ಲಿ ರಸ್ತೆ ತೆರಿಗೆ ಪಾವತಿಸದೆ ಕೋಟ್ಯಂತರ ಮೌಲ್ಯದ ಐಶಾರಾಮಿ ಕಾರುಗಳು ಸಂಚರಿಸುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯವಾಗಿದ್ದು, ಒಬ್ಬನನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.
ಮರ್ಸಿಡೀಸ್ ಬೆನ್ಜ್, ಪೋರ್ಶೆ, ಜಾಗ್ವಾರ್, ಲ್ಯಾಂಬೋರ್ಗಿನಿ, ಬಿಎಂಡಬ್ಲ್ಯೂ, ಇನ್ನೋವಾ ಕ್ರಿಸ್ಟಾ ಸೇರಿದಂತೆ ಐಶಾರಾಮಿ ಕಾರುಗಳು ರಸ್ತೆ ತೆರಿಗೆ ಪಾವತಿಸದೆ ಸಂಚರಿಸುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿದೆ. ರಸ್ತೆ ತೆರಿಗೆ ವಂಚನೆ ಜಾಲಾದಲ್ಲಿ ಭಾಗಿಯಾಗಿದ್ದ ಸ್ಮಾರ್ಟ್ ಕಾರ್ಡ್ ಕಂಪನಿ ಮ್ಯಾನೇಜರ್ ಒಬ್ಬನನ್ನು ಬಂಧಿಸಿದ್ದಾರೆ.
ರೋಸ್ ಮಾರ್ಟ್ ಕಂಪನಿ ರಾಜ್ಯಾದ್ಯಂತ ಆರ್​ಸಿ ಸ್ಮಾರ್ಟ್ ಕಾರ್ಡ್​ನ ಆರ್​ಟಿಓಗೆ ಪೂರೈಕೆ ಮಾಡುತ್ತಿದೆ. ಸಿಸಿಬಿ ತನಿಖೆ ವೇಳೆ ಈ ಔಟ್ ಸೋರ್ಸ್ ಕಂಪನಿಯ ಅಸಲಿಯತ್ತು ಬೆಳಕಿಗೆ ಬಂದಿದೆ. ರೋಸ್ ಮಾರ್ಟ್ ಕಂಪನಿ ಆರ್​ಟಿಓ ಅಧಿಕಾರಿಗಳಿಗೆ ಯಾಮಾರಿಸಿ ನಕಲಿ ನಂಬರ್ ಪ್ಲೇಟ್​ಗಳನ್ನು ನೀಡಿದೆ. ಇದೇ ರೀತಿ 27 ಕಾರುಗಳು ನಕಲಿ ನಂಬರ್ ಪ್ಲೇಟ್​ಗಳನ್ನ ಅಳವಡಿಸಿ ರಸ್ತೆಯಲ್ಲಿ ಓಡಾಡುತ್ತಿವೆ. ಓಡಾಡುತ್ತಿರುವ ಕಾರುಗಳೆಲ್ಲವೂ ಕೋಟ್ಯಾಂತರ ರೂಪಾಯಿ ಮೌಲ್ಯದ್ದು ಎಂದು ತಿಳಿದುಬಂದಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ರೋಚಕ ಸಂಗತಿ:
ಆನಂದ್ ರಾಮ್ ಎಂಬ ವ್ಯಕ್ತಿ ತಮ್ಮ ಜಾಗ್ವಾರ್ ಕಾರಿಗೆ ಎನ್ಓಸಿ ಪಡೆದು ಕಾರನ್ನು ಕರ್ನಾಟಕ ರಿಜಿಸ್ಟ್ರೇಷನ್​ಗೆ ವರ್ಗಾವಣೆ ಮಾಡಲು ಬಂದಿದ್ದಾರೆ. ಆಗ ಕಾರನ್ನು ನಕಲಿ ನಂಬರ್​ನಲ್ಲಿ ರಿಜಿಸ್ಟರ್ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ದೂರು ಕೊಟ್ಟ ಬಳಿಕ ತನಿಖೆಗೆ ಇಳಿದ ಸಿಸಿಬಿಗೆ ಮತ್ತೊಂದು ಶಾಕ್ ಕಾದಿತ್ತು. ಪಶ್ಚಿಮ ಬಂಗಾಳದ ಡಬ್ಲ್ಯೂ ಬಿ 01 ಸೀರಿಸ್ ಅಲ್ಲಿ ಜಾಗ್ವಾರ್ ಕಾರನ್ನು ಇಲ್ಲಿ ರಿಜಿಸ್ಟರ್ ಮಾಡಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ಡಬ್ಲ್ಯೂ ಬಿ 01 ಸೀರಿಸ್ ದ್ವಿಚಕ್ರ ವಾಹನಗಳಿಗೆ ನೀಡಿರುವುದಾಗಿ ಮಾಹಿತಿ ಇದೆ. ಇದೇ ರೀತಿ 27 ಐಷಾರಾಮಿ ಕಾರುಗಳನ್ನು ನಕಲಿ ನಂಬರ್ ಪ್ಲೇಟ್​ನಲ್ಲಿ ಚಲಾಯಿಸುತ್ತಿರುವ ಬಗ್ಗೆ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ.
ವಂಚನೆಯಲ್ಲಿ ಆರ್​ಟಿಒ ಅಧಿಕಾರಿಗಳ ಪಾಲುದಾರಿಕೆ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ತನಿಖೆ ಚುರುಕುಗೊಂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments