Select Your Language

Notifications

webdunia
webdunia
webdunia
webdunia

11 ಕೋಟಿ ರೂಪಾಯಿ ಸಿಕ್ಕಿದೆ ಎಂಬ ಮಾಹಿತಿ ತಪ್ಪು: ಐಟಿ ಅಧಿಕಾರಿಗಳು

11 ಕೋಟಿ ರೂಪಾಯಿ ಸಿಕ್ಕಿದೆ ಎಂಬ ಮಾಹಿತಿ ತಪ್ಪು: ಐಟಿ ಅಧಿಕಾರಿಗಳು
ಬೆಂಗಳೂರು , ಬುಧವಾರ, 2 ಆಗಸ್ಟ್ 2017 (15:49 IST)
ಇಂಧನ ಸಚಿವ ಡಿ.ಕೆ.ಶಿವಕುಮಾರ್ ನವದೆಹಲಿಯ ನಿವಾಸದಲ್ಲಿ 11 ಕೋಟಿ ರೂಪಾಯಿಗಳು ಸಿಕ್ಕಿವೆ ಎನ್ನುವ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.
 
ಸಚಿವ ಡಿ.ಕೆ.ಶಿವಕುಮಾರ್ ನವದೆಹಲಿಯ ನಿವಾಸದ ಮೇಲೆ ದಾಳಿ ಮಾಡಿದಾಗ ಕೆಲ ದಾಖಲೆಗಳು ದೊರೆತಿದ್ದು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆಯೇ ಹೊರತು ಯಾವುದೇ ಹಣ ದೊರೆತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಬೆಂಗಳೂರು, ಕನಕಪುರ, ಈಗಲ್‌ಟೌನ್ ರೆಸಾರ್ಟ್ ಐಟಿ ದಾಳಿಯಲ್ಲೂ ಹಣ ದೊರೆತಿಲ್ಲ. ದಾಖಲಾತಿಗಳು ದೊರೆತಿದ್ದು ಅವುಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಐಟಿ ದಾಳಿ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಸತ್ಯಕ್ಕೆ ದೂರವಾಗಿವೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂತಹ ಸಾಕಷ್ಟು ಆಟಗಳನ್ನು ನೋಡಿದ್ದೇನೆ: ಐಟಿ ದಾಳಿಗೆ ಗೌಡರ ಪ್ರತಿಕ್ರಿಯೆ