Publish Date: Thu, 17 Aug 2017 (10:09 IST)
Updated Date: Thu, 17 Aug 2017 (10:11 IST)
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ಯೋಜನೆ ಜನರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಆದರೆ ಮೊದಲ ದಿನ ಕೊಂಚ ನಿರಾಸೆ ಮೂಡಿಸಿದೆ.
ಅಗ್ಗದ ದರದಲ್ಲಿ ಊಟ, ಉಪಾಹಾರ ಸಿಗುತ್ತದೆಂದು ಬೆಳಿಗ್ಗೆಯಿಂದ ನಗರದ ವಿವಿದೆಡೆ ಕ್ಯಾಂಟೀನ್ ಗೆ ಬೆಳ್ಳಂ ಬೆಳಿಗ್ಗೆ ತಿಂಡಿ ತಿನ್ನಲು ಬಂದ ಗ್ರಾಹಕರಿಗೆ ಕೊಂಚ ನಿರಾಸೆಯಾಗಿದೆ.
ಕೆಲವು ಕಡೆ ತಿಂಡಿ ಇಲ್ಲ ಎಂದು ಬೋರ್ಡ್ ಇದ್ದರೆ, ಇನ್ನು ಕೆಲವೆಡೆ ಕೇವಲ ಒಂದು ಗಂಟೆಯೊಳಗೆ ತಿಂಡಿ ಖಾಲಿ ಎನ್ನುತ್ತಿದ್ದರು. ಮತ್ತೆ ಕೆಲವೆಡೆ ಜನರು ಬೆಳಿಗ್ಗೆ 6 ಗಂಟೆಯಿಂದಲೇ ತಿಂಡಿಗಾಗಿ ಕ್ಯೂ ನಿಂತಿದ್ದರೂ, ಸಮಯಕ್ಕೆ ಸರಿಯಾಗಿ ತಿಂಡಿ ಬರಲಿಲ್ಲ. ಹೀಗಾಗಿ ಮೊದಲ ದಿನ ಕೊಂಚ ಗಲಿಬಿಲಿಯಾಗಿದ್ದು ನಿಜ.