Publish Date: Wed, 22 Jun 2016 (11:06 IST)
Updated Date: Wed, 22 Jun 2016 (11:16 IST)
ಪಶ್ಚಿಮ ಘಟ್ಟಗಳ ರಮಣೀಯ ಸೌಂದರ್ಯವನ್ನು ಅನುಭವಿಸಲು ಬಯಸುವ ಪ್ರವಾಸಿಗರು ಒಮ್ಮೆ ಕೊಡಗು ಜಿಲ್ಲೆಗೆ ಭೇಟಿ ನೀಡಲೇ ಬೇಕು. ಹಸಿರು ಬೆಟ್ಟಗಳ ಮಡಿಲಿನಲ್ಲಿ ತನ್ನ ಸೌಂದರ್ಯವನ್ನು ಬಚ್ಚಿಟ್ಟುಕೊಂಡಿರುವ ಕೊಡಗು ಪ್ರವಾಸಿಕರನ್ನು ಕೈ ಬೀಸಿ ಕರೆಯುತ್ತಿದೆ. ಈ ಸುಂದರ ತಾಣದ ಸೌಂದರ್ಯವನ್ನು ಸವಿಯಲು ಮಳೆಗಾಲ ಮತ್ತು ಚಳಿಗಾಲದಲ್ಲಿ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಭಾರತದ ಸ್ಕಾಟ್ಲ್ಯಾಂಡ್ ಎಂದೆ ಕರೆಸಿಕೊಳ್ಳುವ ಕೊಡುಗು ಜಿಲ್ಲೆ, ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಹಚ್ಚ ಹಸಿರು ಪ್ರದೇಶ, ದಟ್ಟ ಕಾಡು ಮತ್ತು ಕಣಿವೆಗಳಿಂದ ಕೂಡಿರುವ ಈ ತಾಣ ಪ್ರವಾಸಿಗರ ಮನಸ್ಸನ್ನು ಶಾಂತಗೊಳಿಸುವುದರಲ್ಲಿ ಸಂದೇಹವೆ ಇಲ್ಲ.
ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಪ್ರಚೋದಿಸುತ್ತಿರುವ ಈ ಭೂ ಪ್ರದೇಶ, ಕಾಫಿ ತೋಟಗಳಿಂದ ನೋಡುಗರ ಮನಸ್ಸನು ವಿಶಾಲಗೊಳಿಸುತ್ತಿದೆ. ವಿವಿಧ ಬಗೆಯ ಹೂ, ಸಸ್ಯ ಮತ್ತು ಪ್ರಾಣಿ ಆಸಕ್ತಿದಾಯಕರು ಕಂಡಿತವಾಗಿಯೂ ಈ ಪ್ರದೇಶಕ್ಕೆ ಭೇಟಿ ನೀಡುವುದು ಅವಶ್ಯಕವಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.