Publish Date: Fri, 01 Sep 2023 (16:45 IST)
Updated Date: Fri, 01 Sep 2023 (16:52 IST)
ವಿಪಕ್ಷಗಳ ಮೈತ್ರಿಕೂಟ ಇಂಡಿಯಾದ ಸಭೆ ಮುಂಬೈನಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ಗೆ ಆಗಮಿಸಿದ್ದು, ಇಂದು ಮತ್ತು ನಾಳೆ ದಿನ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 28 ರಾಜಕೀಯ ಪಕ್ಷಗಳ ಸುಮಾರು 63 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಲೋಗೋ, ಸಮನ್ವಯ ಸಮಿತಿ ಮತ್ತು ಕ್ರಿಯಾ ಯೋಜನೆ ಬಗ್ಗೆ ನಿರ್ಧಾರವಾಗಲಿದೆ. ಸಭೆಯಲ್ಲಿ ಪ್ರಮುಖ ಅಜೆಂಡಾ ಎಂದರೆ ಲೋಗೋವನ್ನು ಆಯ್ಕೆ ಮಾಡುವುದು ಮತ್ತು ಸಮನ್ವಯ ಸಮಿತಿಯನ್ನು ಸ್ಥಾಪಿಸುವುದು ಆಗಿದೆ. ಮೈತ್ರಿಕೂಟವು ಸಂಚಾಲಕರನ್ನು ಹೊಂದಬೇಕೇ ಅಥವಾ ಬೇಡವೇ ಮತ್ತು 2024 ರ ಚುನಾವಣೆಗೆ ಜಂಟಿ ಕ್ರಿಯಾ ವೇಳಾಪಟ್ಟಿಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.