ನವದೆಹಲಿ-ದೇಶದ ರಾಜಕಾರಣದಲ್ಲಿ ಅಕ್ಷರಶಃ ಬದಲಾವಣೆಯ ಗಾಳಿ ಬೀಸ ತೊಡಗಿದೆ. ಎನ್‌ಡಿಎ ಮತ್ತು ಇಂಡಿಯಾ ಕೂಟದ ಮಧ್ಯೆ ೨೦೨೪ರ ಈ ಸಮರದಲ್ಲಿ ಭಾರೀ ಪೈಪೋಟಿಯನ್ನು ಆರಂಭದಲ್ಲಿ ನಿರೀಕ್ಷೆ ಮಾಡಲಾಗಿತ್ತು ಆದರೆ ಕಾಂಗ್ರೆಸ್‌ನ ನಿಲುವುಗಳೋ ಅಥವಾ ಇನ್ನೊಂದೋ ದಿನದಿಂದ ದಿನಕ್ಕೆ ಇಂಡಿಯಾ ಕೂಟದಲ್ಲಿ ಬಿರುಕು ಮೂಡುತ್ತಿದೆ.ಹೀಗೆ ಒಂದೊAದೇ ಪಾರ್ಟಿಗಳು ಮಹಾಘಟಬಂಧನ್ ಮೈತ್ರಿಯನ್ನು ಕಟ್ ಮಾಡುತ್ತಾ ಹೋಗ್ತಾ ಇರೋದು ಎನ್‌ಡಿಎಗೆ ಆನೆಬಲವನ್ನು ತಂದಿದೆ. ಇದಲ್ಲದೇ ಕೆಲವು ಪ್ರಾದೇಶಿಕ ಪಕ್ಷಗಳು ಎನ್‌ಡಿಎ ಕೂಟವನ್ನು ಸೇರುವ ಸಾಧ್ಯತೆಯೂ ಹೆಚ್ಚಿದೆ.
ಈಗಾಗಲೇ ನಿತೀಶ್‌ಕುಮಾರ್ ಮೋದಿಯ ಸೇನೆಯನ್ನು ಸೇರಿದ್ದಾಗಿದೆ. ಮಮತಾ ಬ್ಯಾನರ್ಜಿ ಕಾಂಗ್ರೆಸ್‌ನ ನೇತೃತ್ವವನ್ನು ಸಹಿಸದೇ ದೂರ ಸರಿಯುವ ಸೂಚನೆ ಕೊಟ್ಟಾಗಿದೆ. ಇದರ ಬೆನ್ನಲ್ಲೇ ಇದೀಗ ಎಎಪಿ ಕೂಡ ಐಎನ್‌ಡಿಐಎ ಕೂಟಕ್ಕೆ ಶಾಕ್ ನೀಡಲು ಮುಂದಾಗಿದೆ.ಹೀಗೆ ಒಂದೊAದೇ ಪಾರ್ಟಿಗಳು ಮಹಾಘಟಬಂಧನ್‌ಗೆ ಸೆಡ್ಡು ಹೊಡೆದು ಹೊರ ಬರ್ತಾ ಇರೋದು ಎಲೆಕ್ಷನ್ ಬರೋ ಹೊತ್ತಿಗೆ ಕಾಂಗ್ರೆಸ್‌ನ್ನು ಅಕ್ಷರಶಃ ಏಕಾಂಗಿ ಮಾಡೋದು ಬಹುತೇಕ ನಿಕಿ ಎನ್ನಲಾಗ್ತಿದೆ.