48 ಗಂಟೆ ಕೆಲಸ ಮಾಡಿದರೆ 3 ದಿನ ವೀಕಾಫ್: ಕೇಂದ್ರದಿಂದ ಕಾರ್ಮಿಕ ಹೊಸ ನಿಯಮ

Krishnaveni K
ಮಂಗಳವಾರ, 16 ಡಿಸೆಂಬರ್ 2025 (14:15 IST)
ನವದೆಹಲಿ: ವಾರಕ್ಕೆ 48 ಗಂಟೆ ಕೆಲಸ ಮಾಡಿದರೆ ಇನ್ನು 3 ವೀಕಾಫ್ ಎಂಜಾಯ್ ಮಾಡಬಹುದು ಎಂದು ಕೇಂದ್ರ ಕಾರ್ಮಿಕ ಇಲಾಖೆ ಹೊಸ ನಿಯಮ ಜಾರಿಗೆ ತರಲು ಹೊರಟಿದೆ.

ವಿದೇಶಗಳಂತೆ ಈಗ ಭಾರತದಲ್ಲೂ ಕಾರ್ಮಿಕರಿಗೆ ಮೂರು ದಿನ ರಜೆ ಆಫರ್ ನೀಡಲಾಗಿದೆ. ಕೇಂದ್ರ ಸರ್ಕಾರ ಹೊಸ ಕಾರ್ಮಿಕ ನೀತಿ ಜಾರಿಗೆ ತರುತ್ತಿದೆ. ಅದರಂತೆ ವಾರಕ್ಕೆ 48 ಗಂಟೆ ಕೆಲಸ ಮಾಡಿದರೆ ಮೂರು ವೀಕಾಫ್ ಪಡೆಯಬಹುದಾಗಿದೆ. ಕಾರ್ಮಿಕರಿಗೆ ಅನುಕೂಲವಾಗುವಂತಹ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.

ಹೊಸ ನಿಯಮದ ಪ್ರಕಾರ ಒಬ್ಬ ನೌಕರನಿಂದ ಒಂದು ವಾರಕ್ಕೆ 48 ಗಂಟೆ ಮಾತ್ರ ಕೆಲಸ ಮಾಡಿಸಬೇಕು. ಹೆಚ್ಚು ಕೆಲಸ ಮಾಡಿದರೆ ಒಟಿ ನೀಡಬೇಕು. ಒಂದು ದಿನದಲ್ಲಿ ಎಷ್ಟು ಬೇಕಾದರೂ ಕೆಲಸ ಮಾಡಬಹುದು. ಆದರೆ ವಾರಕ್ಕೆ 48 ಗಂಟೆ ಮೀರಬಾರದು. ಇದರಿಂದ ಕಾರ್ಮಿಕರಿಗೆ ಮೂರು ದಿನ ಪೇಯ್ಡ್ ಲೀವ್ ಸಿಗುತ್ತದೆ.

ಒಂದು ವೇಳೆ ನಿಮಗೆ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡಲು ಸಾಧ್ಯ ಎಂದರೆ ವಾರಕ್ಕೆ ಆರು ದಿನ ದುಡಿಯಬೇಕಾಗುತ್ತದೆ. ದಿನಕ್ಕೆ 10 ಗಂಟೆ ಕೆಲಸ ಮಾಡಿದರೆ ವಾರಕ್ಕೆ ಎರಡು ರಜೆ ಪಡೆಯಬಹುದಾಗಿದೆ. ಇದನ್ನು ಆಯಾ ಕಂಪನಿಗಳು ಉದ್ಯೋಗಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಕಾರ್ಮಿಕ ಇಲಾಖೆ ಪ್ರಕಟಣೆ ನೀಡಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಜಾಬ್, ಜನಿವಾರ ಓಕೆ, ಕೇಸರಿ ಶಾಲು, ಪೇಟಕ್ಕೆ ಅವಕಾಶ ಕೊಡಲ್ಲ: ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೋದಿ ಇಂಧನ ಉಳಿತಾಯ ಮಾಡಲು ಹೇಳಿದ್ದಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹೇಗೆ ಬಂದ್ರು ನೋಡಿ Video

ಜಾತಿ ವಿಷ ಬೀಜ ಬಿತ್ತಲು ಹೊರಟ ಸರ್ಕಾರ: ಮಹೇಶ್ ಟೆಂಗಿನಕಾಯಿ

ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್: ಮೃದು ಸ್ವಭಾವದ ಪ್ರಬಲ ನಾಯಕ

ವಿ ಡಿ ಸತೀಶನ್ ಕೇರಳಂ ನೂತನ ಸಿಎಂ

ಮುಂದಿನ ಸುದ್ದಿ
Show comments