ಭಾರತದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, 2021ರಲ್ಲಿ ಬರೋಬ್ಬರಿ 126 ಹುಲಿಗಳು ಮೃತಪಟ್ಟಿರುವ ಬಗ್ಗೆ ಹುಲಿ ಸಂರಕ್ಷಣಾ ಸಂಸ್ಥೆ (ಎನ್ ಟಿಸಿಎ) ತಿಳಿಸಿದೆ.
ಹುಲಿಗಳ ಸಾವಿನ ಕುರಿತು ಎನ್ ಟಿಸಿಎ ವರದಿ ನೀಡಿದ್ದು, ಭಾರತ ಪ್ರಪಂಚದ ಶೇ.75ರಷ್ಟು ಹುಲಿಗಳನ್ನು ಹೊಂದಿರುವ ರಾಷ್ಟ್ರವಾಗಿದ್ದು, 2016ರಲ್ಲಿ ಅತಿ ಹೆಚ್ಚು ಅಂದರೆ 121 ಹುಲಿಗಳು ಮೃತಪಟ್ಟಿದ್ದವು. ಆದರೆ 2021ರಲ್ಲಿ ದಶಕಗಳಲ್ಲಿ ಕಾಣದ ದಾಖಲೆಯ ಹುಲಿಗಳ ಸಾವು ಸಂಭವಿಸಿದೆ ಎಂದಿದೆ.
2018ರಲ್ಲಿ ಪ್ರಧಾನಿ ಮೋದಿ ದೇಶದಲ್ಲಿ ಹುಲಿಗಳ ಸಂಖ್ಯೆ ಐತಿಹಾಸಿಕ ಮಟ್ಟದಲ್ಲಿ ಏರಿಕೆಯಾಗಿದೆ ಎಂದಿದ್ದರು. 2006ರಲ್ಲಿ 1,411 ಹುಲಿಗಳಿದ್ದರೆ 2018ರಲ್ಲಿ 2,967 ಹುಲಿಗಳು ಇದ್ದವು.
ಎನ್ ಟಿಸಿಎ ವರದಿ ಪ್ರಕಾರ ಕಳೆದ ದಶಕದಲ್ಲಿನ ಹುಲಿಗಳ ಸಾವಿಗೆ ನೈಸರ್ಗಿಕ ಕಾರಣ ಹಾಗೂ ಮಾನವನೊಂದಿಗಿನ ಸಂಘರ್ಷವೇ ಕಾರಣ ಎಂದು ದಾಖಲಿಸಿದೆ. 2014-2019ರ ನಡುವೆ ಸುಮಾರು 225 ಮಂದಿ ಹುಲಿ ದಾಳಿಗೆ ಮೃತಪಟ್ಟಿದ್ದಾರೆ. ಆದರ ನಡುವೆಯೂ ಹುಲಿಗಳ ಸಂರಕ್ಷಣೆಗಾಗಿ ಸರ್ಕಾರ 50 ಸ್ಥಳಗಳನ್ನು ಕಾಯ್ದಿರಿಸಿದೆ.