ಐಡಿಎಫ್​ಸಿ ಬ್ಯಾಂಕ್​ ಉಳಿತಾಯ ಖಾತೆ ಬಡ್ಡಿ ದರಗಳಲ್ಲಿ ಹೆಚ್ಚಳ; ಏಪ್ರಿಲ್ 1ರಿಂದ ಜಾರಿ

Webdunia
ಭಾನುವಾರ, 27 ಮಾರ್ಚ್ 2022 (19:28 IST)
ಖಾಸಗಿ ವಲಯದ ಬ್ಯಾಂಕ್​ ಆದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್​ನಿಂದ ಉಳಿತಾಯ ಖಾತೆಗಳ (Savings Account) ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಗ್ರಾಹಕರು ಈಗ ಏಪ್ರಿಲ್ 1, 2022ರಿಂದ ಅನ್ವಯ ಆಗುವಂತೆ ತಮ್ಮ ಉಳಿತಾಯ ಖಾತೆಗಳ ಮೇಲೆ ಶೇ 6ರ ವರೆಗೆ (ಇದು ಮೊದಲು ಶೇ 5 ಆಗಿತ್ತು) ಬಡ್ಡಿಯನ್ನು ಗಳಿಸಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ, ಉಳಿತಾಯ ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿಯನ್ನು ದೈನಂದಿನವಾಗಿ ದಿನದ ಕೊನೆಯಲ್ಲಿ ಇರುವ ಬ್ಯಾಲೆನ್ಸ್​ನಲ್ಲಿ ನಿರ್ಧರಿಸಲಾಗುತ್ತದೆ. ಐಡಿಎಫ್​ಸಿ ಫಸ್ಟ್​ ಬ್ಯಾಂಕ್​ನಿಂದ ಬಡ್ಡಿಯನ್ನು ಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ.
 
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಉಳಿತಾಯ ಖಾತೆ ಹೊಸ ಬಡ್ಡಿ ದರಗಳು
ಹೊಂದಾಣಿಕೆಯ ನಂತರ, ಬ್ಯಾಂಕ್ ಈಗ ರೂ. 1 ಲಕ್ಷಕ್ಕಿಂತ ಕಡಿಮೆ ಉಳಿತಾಯ ಖಾತೆಯ ಬ್ಯಾಲೆನ್ಸ್‌ಗಳ ಮೇಲೆ ಶೇಕಡಾ 4.00ರ ಬಡ್ಡಿ ದರವನ್ನು ಮತ್ತು ರೂ. 1 ಲಕ್ಷಕ್ಕಿಂತ ಹೆಚ್ಚು ಹಾಗೂ 10 ಲಕ್ಷಕ್ಕಿಂತ ಕಡಿಮೆ ಬ್ಯಾಲೆನ್ಸ್ ಇದ್ದಲ್ಲಿ ಶೇಕಡಾ 4.50 ಬಡ್ಡಿ ದರವನ್ನು ಒದಗಿಸುತ್ತದೆ. ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಈಗ 10 ಲಕ್ಷಕ್ಕಿಂತ ಹೆಚ್ಚು ಆದರೆ 25 ಲಕ್ಷಕ್ಕಿಂತ ಕಡಿಮೆ ಇರುವ ಉಳಿತಾಯ ಖಾತೆಯ ಬ್ಯಾಲೆನ್ಸ್‌ಗಳ ಮೇಲೆ ಶೇ 5.00ರ ಬಡ್ಡಿ ದರವನ್ನು ನೀಡುತ್ತಿದೆ. ಉಳಿತಾಯ ಖಾತೆಯ ಗ್ರಾಹಕರು ಈಗ 25 ಲಕ್ಷ ರೂಪಾಯಿಗಳಿಂದ 1 ಕೋಟಿಗಿಂತ ಕಡಿಮೆ ಮೊತ್ತದ ಬ್ಯಾಲೆನ್ಸ್‌ಗಳ ಮೇಲೆ ಗರಿಷ್ಠ ಶೇ 6ರ ಬಡ್ಡಿದರವನ್ನು ಪಡೆಯುತ್ತಾರೆ.ರೂ. 1 ಕೋಟಿಗಿಂತ ಹೆಚ್ಚಿನ, ಆದರೆ ರೂ. 100 ಕೋಟಿಗಿಂತ ಕಡಿಮೆ ಇರುವ ದೈನಂದಿನ ಅಂತ್ಯದ ಬಾಕಿಗಳ ಮೇಲಿನ ಬಡ್ಡಿ ದರವು ಈಗ ಶೇಕಡ 5.00 ಆಗಿರುತ್ತದೆ. 100 ಕೋಟಿ ರೂಪಾಯಿಗಳಿಂದ 200 ಕೋಟಿ ರೂಪಾಯಿಗಿಂತ ಕಡಿಮೆ ಇರುವ ದಿನದ ಅಂತ್ಯದ ಬಾಕಿಗಳ ಮೇಲಿನ ಬಡ್ಡಿ ದರವು ಈಗ ಶೇಕಡಾ 4.50 ಆಗಿರುತ್ತದೆ. ಇನ್ನು 200 ಕೋಟಿ ರೂಪಾಯಿಗಿಂತ ಬ್ಯಾಲೆನ್ಸ್ ಹೆಚ್ಚಿದ್ದಲ್ಲಿ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಶೇ 3.50ರ ಬಡ್ಡಿ ದರವನ್ನು ನೀಡುತ್ತದೆ. ಈ ದರಗಳು ಏಪ್ರಿಲ್ 1, 2022ರಂದು ಜಾರಿಗೆ ಬರುತ್ತವೆ. “1ನೇ ಏಪ್ರಿಲ್ 2022ರಿಂದ ಉಳಿತಾಯ ಖಾತೆಯಲ್ಲಿ ಶೇ 6ರ ವರೆಗೆ ಬಡ್ಡಿದರಗಳನ್ನು ಗಳಿಸಿ” ಎಂದು ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.
 
ಬ್ಯಾಲೆನ್ಸ್ (ರೂಪಾಯಿಗಳು)                                                                           ಬಡ್ಡಿ ದರ (ವಾರ್ಷಿಕ) 
1 ಲಕ್ಷಕ್ಕಿಂತ ಕಡಿಮೆ ಅಥವಾ ಸಮ                                                                           ಶೇ 4.00
1 ಲಕ್ಷಕ್ಕಿಂತ ಹೆಚ್ಚು ಅಥವಾ 10 ಲಕ್ಷಕ್ಕಿಂತ ಕಡಿಮೆ ಅಥವಾ ಸಮ                                        ಶೇ 4.50
10 ಲಕ್ಷಕ್ಕಿಂತ ಹೆಚ್ಚು 25 ಲಕ್ಷಕ್ಕಿಂತ ಕಡಿಮೆ ಅಥವಾ ಸಮ                                                ಶೇ 5
25 ಲಕ್ಷಕ್ಕಿಂತ ಹೆಚ್ಚು 1 ಕೋಟಿಗಿಂತ ಕಡಿಮೆ ಅಥವಾ ಸಮ                                               ಶೇ 6
1 ಕೋಟಿಗಿಂತ ಹೆಚ್ಚು 100 ಕೋಟಿಗಿಂತ ಕಡಿಮೆ ಅಥವಾ ಸಮ                                          ಶೇ 5
100 ಕೋಟಿಗಿಂತ ಹೆಚ್ಚು 200 ಕೋಟಿಗಿಂತ ಕಡಿಮೆ ಅಥವಾ ಸಮ                                       ಶೇ 4.50
200 ಕೋಟಿಗಿಂತ ಹೆಚ್ಚು                                                                                         ಶೇ 3.50

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಹಿಳೆಯರಿಗೆ ಸಿದ್ದರಾಮಯ್ಯ ಸರ್ಕಾರದ ಗಿಫ್ಟ್: ಇನ್ನು ತಿಂಗಳಿಗೊಂದು ವೇತನ ಸಹಿತ ಮುಟ್ಟಿನ ರಜೆ

17ಮಕ್ಕಳ ಸಾವಿಗೆ ಕಾರಣಾವಾದ ಕೆಮ್ಮು ಸಿರಪ್‌ ಕಂಪನಿಯ ಮಾಲೀಕ ಕೊನೆಗೂ ಅರೆಸ್ಟ್‌

ಉರಿಸೋದು ಅಂದ್ರೆ ಇದು... ಊಟದ ಮೆನುವಿನಲ್ಲಿ ಪಾಕಿಸ್ತಾನವನ್ನು ಹುರಿದು ಮುಕ್ಕಿದ ಭಾರತೀಯ ಸೇನೆ

ಐಪಿಎಸ್‌ ಅಧಿಕಾರಿ ವೈ.ಪೂರನ್‌ ಕುಮಾರ್‌ ಆತ್ಮಹತ್ಯೆಯ ಕಾರಣ ಬಹಿರಂಗಪಡಿಸಿದ ಪತ್ನಿ ಅಮ್ನೀತ್‌

ಬೆಸ್ಟ್ ಫಿನ್ಟೆಕ್ ಇನ್ಶುರೆನ್ಸ್ ಅವಾರ್ಡ್ ಪಡೆದ ಡಿಜಿಟ್ ಇನ್ಶುರೆನ್ಸ್

ಮುಂದಿನ ಸುದ್ದಿ
Show comments