ಬೆಂಗಳೂರು : ಸಾವರ್ಕರ್ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಾಗಲೇ ರಾಜ್ಯ ಸರ್ಕಾರ ಪಠ್ಯಪುಸ್ತಕದಲ್ಲಿ ವೀರ ಸಾವರ್ಕರ್ ಕುರಿತಾದ ಪಠ್ಯವನ್ನು ಸೇರ್ಪಡೆ ಮಾಡಿದೆ.
2022 ರಲ್ಲಿ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆ ಪಠ್ಯದಲ್ಲಿ ಸಾವರ್ಕರ್ ಅವರ ಕುರಿತಾದ ಪಠ್ಯ ಸೇರ್ಪಡೆ ಮಾಡಲಾಗಿದೆ. 8ನೇ ತರಗತಿ ಕನ್ನಡ ವಿಷಯದಲ್ಲಿ ಕೆ.ಟಿ. ಗಟ್ಟಿ ರಚನೆಯ ʼಕಾಲವನ್ನು ಗೆದ್ದವರುʼ ಎಂಬ ಪಠ್ಯವನ್ನು ಸೇರಿಸಲಾಗಿದೆ.
ಈ ಪಠ್ಯದಲ್ಲಿ ಸಾವರ್ಕರ್ ಅವರು ಅಂಡಮಾನ್ ಜೈಲಿನಲ್ಲಿ ಇದ್ದ ವಿವರ, ಅವರಿಗೆ ನೀಡಿದ ಶಿಕ್ಷೆ, ಅವರ ಹೋರಾಟಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. 2017-18 ರಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯದಲ್ಲಿದ್ದ ವಿಜಯಮಾಲಾ ರಂಗನಾಥ್ ರಚಿತ ಬ್ಲಡ್ ಗ್ರೂಪ್ ಪಠ್ಯವನ್ನು ಕೈ ಬಿಟ್ಟು ಹೊಸದಾಗಿ ಕಾಲವನ್ನು ಗೆದ್ದವರು ಎಂಬ ಸಾವರ್ಕರ್ ಪಠ್ಯ ಸೇರ್ಪಡೆ ಮಾಡಲಾಗಿದೆ.