Publish Date: Sun, 02 Oct 2022 (20:41 IST)
Updated Date: Sun, 02 Oct 2022 (20:45 IST)
ದೇಶದೆಲ್ಲೆಡೆ ಗಾಂಧಿ ಜಯಂತಿಯನ್ನು ಆಚರಿಸುತ್ತಿರುವ ದೇಶದೆಲ್ಲೆಡೆ ಮಾಂಸಂಗಡಿಗಳು ಹಾಗೂ ಮದ್ಯಂಗಡಿಗಳನ್ನು ಮುಚ್ಚಲಾಗಿದೆ. ಆದರೆ ಗಾಂಧಿ ಜಯಂತಿಯಂದೂ ಅಕ್ರಮ ಮದ್ಯ ಮಾರಾಟ ನಿಂತಿಲ್ಲ, ರಾಜ್ಯದ ಗಡಿಯಲ್ಲಿ ರಾಜಾರೋಷವಾಗಿ ಮದ್ಯದ ಬಾಕ್ಸ್‌ಗಳನ್ನು ವಿಂಗಡಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನಲ್ಲಿ ಅಕ್ರಮ ಮದ್ಯ ಸರಬರಾಜು ನಡೆಯುತ್ತಿದೆ. ಸಾರ್ವಜನಿಕರು ಮದ್ಯ ಸರಬರಾಜು ಬಗ್ಗೆ ವಿಡಿಯೋ ಮಾಡುತ್ತಿದ್ದರೂ ಮದ್ಯ ಸಾಗಣೆದಾರರು ಕ್ಯಾರೆ ಎನ್ನುತ್ತಿಲ್ಲ. ಹಾಡಹಗಲೇ ಅಕ್ರಮ ಮದ್ಯ ಸರಬರಾಜು ನಡೆಯುತ್ತಿದ್ದರೂ ಅಬಕಾರಿ ಇಲಾಖೆಯ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ.