Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮತ್ತೊಂದು ಮರ್ಯಾದೆ ಹತ್ಯೆ: ತಂದೆಯಿಂದಲೇ ಪುತ್ರಿಯ ಹತ್ಯೆ

ರಾಜ್ಯ
ಕೋಲಾರ , ಸೋಮವಾರ, 23 ಮೇ 2016 (14:48 IST)
ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದಳೆಂದು ಹೆತ್ತ ತಂದೆ ತಾಯಿಯೇ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಹೇಯ ಕೃತ್ಯ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕಮಟಂಪಲ್ಲಿ ಗ್ರಾಮದಲ್ಲಿ ನಡೆದಿದೆ.
 
17 ವರ್ಷದ ಪ್ರಿಯಾ ಎಂಬ ಅಪ್ರಾಪ್ತೆ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು, ಈ ವಿಚಾರ ಅಪ್ರಾಪ್ತ ಬಾಲಕಿಯ ತಂದೆ ಬೈರಾರೆಡ್ಡಿಗೆ ಗಮನಕ್ಕೆ ಬಂದಿದೆ. ಮಗಳು ಅಂತರ್ಜಾತಿಯ ಯುವಕನನ್ನ ಮದುವೆ ಆಗ್ತಾಳೆ ಎಂದು ಆತಂಕಗೊಂಡ ಪೋಷಕರು ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ. 
 
ಪುತ್ರಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿರುವ ವಿಚಾರದಿಂದ ಬೇಸತ ಪೋಷಕರು ಊರು ಬಿಟ್ಟು ಹೋಗಲು ನಿರ್ಧರಿಸಿದ್ದರು. ಆದರೆ, ಪುತ್ರಿ ಹಾಗೂ ಅನ್ಯ ಜಾತಿಯ ಯುವಕನ ಭಾವಚಿತ್ರಗಳು ಪೋಷಕರಿಗೆ ದೊರೆತ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬಾಲಕಿಯ ತಂದೆ ಮತ್ತು ಅಣ್ಣ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
 
ಈ ಕುರಿತು ಕಮಟಂಪಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಾದ ಬಾಲಕಿ ತಂದೆ ಬೈರಾರೆಡ್ಡಿ, ತಾಯಿ ಮತ್ತು ಅಣ್ಣನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್, ಬಿಜೆಪಿಯದ್ದು ಪತಿ-ಪತ್ನಿ ರೀತಿಯ ಸಂಬಂಧ: ಅರವಿಂದ್ ಕೇಜ್ರಿವಾಲ್