ಬೆಳಗಾವಿ : ಕಷ್ಟ ಕಾಲದಲ್ಲಿ ಸವದಿ, ಶೆಟ್ಟರ್ ಅವರು ನಮ್ಮ ಪಕ್ಷಕ್ಕೆ ಬಂದು ನಮಗೆ ಶಕ್ತಿ ತುಂಬಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸವದಿ ಮತ್ತು ಶೆಟ್ಟರ್ ಅವರ ಜೊತೆಗೆ ಮಾತನಾಡಲು ನನಗೆ ಸಮಯವೇ ಸಿಕ್ಕಿರಲಿಲ್ಲ. ಚುನಾವಣೆ ಆದ ಮೇಲೂ ಟೈಂ ಸಿಕ್ಕಿರಲಿಲ್ಲ. ಹೀಗಾಗಿ ಸವದಿ ಸಾಹೇಬರು, ಜಗದೀಶ ಶೆಟ್ಟರ್ ಅವರನ್ನು ಭೇಟಿಯಾಗಲು ಬಂದಿದ್ದೇನೆ ಎಂದರು.
ಏನಾದರೂ ಬೇಸರವಾಗಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೂ ಬೇಸರವಿಲ್ಲ. ನಾನೊಬ್ಬ ಪಕ್ಷದ ಅಧ್ಯಕ್ಷನಾಗಿ, ಸೀನಿಯರ್ ಲೀಡರ್ ಇದ್ದೇನೆ. ಲಕ್ಷ್ಮಣ ಸವದಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು ಎಂಬ ವಿಚಾರ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಯಾರನ್ನೂ ಕೈ ಬಿಡುವುದಿಲ್ಲ. ಅಷ್ಟು ಮಾತ್ರ ಹೇಳುತ್ತೇನೆ. ಯಾವಾಗ, ಏನು ಎಂದು ಕೇಳಬೇಡಿ ಎಂದು ಹೇಳಿದರು.