Select Your Language

Notifications

webdunia
webdunia
webdunia
webdunia

ಜನರನ್ನು ಕಚೇರಿಗೆ ಅಲೆದಾಡಿಸುವುದು ಭ್ರಷ್ಟಾಚಾರವೇ: ಸಿಎಂ ಸಿದ್ದರಾಮಯ್ಯ

ಜನರನ್ನು ಕಚೇರಿಗೆ ಅಲೆದಾಡಿಸುವುದು ಭ್ರಷ್ಟಾಚಾರವೇ: ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಶುಕ್ರವಾರ, 1 ಜುಲೈ 2016 (17:11 IST)
ಲಂಚ ತೆಗೆದುಕೊಂಡರೆ ಮಾತ್ರ ಭ್ರಷ್ಟಾಚಾರವಾಗುವುದಿಲ್ಲ ಜನರನ್ನು ಕಚೇರಿಗೆ ಅಲೆದಾಡಿಸುವುದು ಕೂಡಾ ಭ್ರಷ್ಟಾಚಾರವೇ. ಜನರಿಗೆ ಕಿರುಕುಳ ನೀಡದೆ ಯೋಜನೆಗಳನ್ನು ತಲುಪಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯ ಎಂದರು.  
 
ನಾವು ಹೆಚ್ಚು ಕೆಲಸ ಮಾಡ್ತೇವೆ ಆದ್ರೆ ಪ್ರಚಾರ ತೆಗೆದುಕೊಳ್ಳುವುದಿಲ್ಲ. ವಿಪಕ್ಷಗಳು ಸುಳ್ಳು ಆರೋಪಗಳನ್ನು ಸತ್ಯವನ್ನಾಗಿಸಲು ಹೊರಟಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
 
ನಾವು ಮತ್ತು ಅಧಿಕಾರಿಗಳು ಜನರಿಗಾಗಿ ಇದ್ದೇವೆ. ಕೇಂದ್ರ ಸರಕಾರದ ಯೋಜನೆಗಳಿಗಾಗಿ ಅರ್ದದಷ್ಟು ಹಣ ನೀಡಿದ್ದೇವೆ. ರಾಜ್ಯದ ಪ್ರತಿಯೊಬ್ಬರಿಗೆ ನೆಮ್ಮದಿಯ ಜೀವನ ದೊರೆಯಬೇಕು ಎನ್ನುವುದು ಸರಕಾರದ ಕನಸಾಗಿದೆ ಎಂದು ಹೇಳಿದ್ದಾರೆ.  
 
ರಾಜ್ಯವನ್ನು ಹಸಿವು ಮುಕ್ತವನ್ನಾಗಿಸಲು ಪ್ರಯತ್ನ ನಡೆದಿದೆ. ರಾಜ್ಯವನ್ನು ರೋಗಮುಕ್ತವಾಗಿಸಲು 6001 ಶುದ್ದ ನೀರಿನ ಘಟಕಗಳನ್ನು ಆರಂಭಿಸಿದ್ದೇವೆ
 
 ಎಲ್ಲದಕ್ಕೂ ನಿಮ್ಮ ಆಶೀರ್ವಾದವಿರಬೇಕು. ನಿಮ್ಮ ಆಶೀರ್ವಾದವಿದ್ದಲ್ಲಿ ಜನಪರ ಕಾರ್ಯಗಳನ್ನು ಮಾಡಲು ಪ್ರೇರಣೆ ನೀಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

25 ವರ್ಷಗಳ ನಂತರವೂ ಭಾರತದಲ್ಲಿ ಬದಲಾವಣೆಯಾಗಿಲ್ಲ: ಮನಮೋಹನ್ ಸಿಂಗ್