Publish Date: Tue, 21 Mar 2017 (18:48 IST)
Updated Date: Tue, 21 Mar 2017 (18:50 IST)
ವಿಧಾನಸಭಾ ಕಲಾಪದಲ್ಲಿ ಕೇಸರಿ ಬಣ್ಣದ ಡ್ರೆಸ್ ತೊಟ್ಟುಕೊಂಡ ಬಂದ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಬಿಜೆಪಿ ಮುಖಂಡರ ಚರ್ಚೆಗೆ ಗ್ರಾಸವಾದರು.
ಉಗ್ರಪ್ಪ ಅವರ ಡ್ರೆಸ್ ಕಂಡ ಬಿಜೆಪಿ ಶಾಸಕ ರಾಮಚಂದ್ರೇಗೌಡ, ಉಗ್ರಪ್ಪ ಕೇಸರಿ ಕಲರ್ ಡ್ರೆಸ್ ಹಾಕಿದ್ದಾರೆ ಎಂದ ಚಟಾಕಿ ಹಾರಿಸಿದರು. ಪಕ್ಕದಲ್ಲಿಯೇ ಉಪಸ್ಥಿತರಿದ್ದ ಬಿಜೆಪಿ ಸದಸ್ಯೆ ತಾರಾ, ಉಗ್ರಪ್ಪ ಅವರು ಮನಸ್ಸಿಲ್ಲಿರುವುದನ್ನು ಡ್ರೆಸ್ ಮೇಲೆ ತೋರಿಸುತ್ತಾರೆ ಎಂದ ಛೇಡಿಸಿದರು.
ಬಿಜೆಪಿ ಸದಸ್ಯರ ಚಟಾಕಿಗಳಿಗೆ ಉತ್ತರಿಸಲು ಉಗ್ರಪ್ಪ ಎದ್ದು ನಿಂತಾಗ ಅವರಿಗೆ ಕೈ ಮುಗಿದ ನಟಿ ತಾರಾ, ಅಣ್ಣಾ ನಾನು ಮಾತನಾಡುತ್ತೇನೆ. ಕೇಸರಿ ಬಣ್ಣ ನಿಮಗೆ ಇಷ್ಟವಿದ್ದಲ್ಲಿ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಬಹುದು ಎಂದು ಚಟಾಕಿ ಹಾರಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.