ಅಕ್ರಮ ಸಂಬಂಧ : ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದ ಗಂಡ!

Webdunia
ಸೋಮವಾರ, 26 ಜೂನ್ 2023 (08:07 IST)
ಚಿಕ್ಕಬಳ್ಳಾಪುರ : ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹಿನ್ನೆಲೆ ಪ್ರಿಯಕರನ ಕತ್ತು ಸೀಳಿ ಆಕೆಯ ಪತಿ ರಕ್ತ ಕುಡಿದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ನಡೆದಿದೆ.
 
ಚಿಂತಾಮಣಿ ತಾಲೂಕಿನ ಬಟ್ಲಪಲ್ಲಿ ನಿವಾಸಿ ವಿಜಯ್ ತನ್ನ ಪತ್ನಿಯ ಪ್ರಿಯಕರನಾದ ಬಾಗೇಪಲ್ಲಿ ತಾಲೂಕು ಮಂಡಂಪಲ್ಲಿ ನಿವಾಸಿ ಮಾರೇಶ್ ಎಂಬಾತನ ಕತ್ತು ಸೀಳಿ ರಕ್ತ ಹೀರಿದ್ದಾನೆ. ಅಸಲಿಗೆ ವಿಜಯ್ ಹಾಗೂ ಮಾರೇಶ್ ಇಬ್ಬರು ಚಿಂತಾಮಣಿ ನಗರದಲ್ಲಿ ವಾಸವಾಗಿದ್ದು, ಇಬ್ಬರೂ ಸಹ ಟಾಟಾ ಏಸ್ ವಾಹನದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದರು.

ತನ್ನ ಹೆಂಡತಿ ಮಾಲಾ ಜೊತೆ ಮಾರೇಶ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡ ವಿಜಯ್, ಮಾರೇಶ್ನನ್ನು ಕೊಲೆ ಮಾಡುವ ಉದ್ದೇಶದಿಂದ ಟಾಟಾ ಏಸ್ ಗಾಡಿ ತೆಗೆದುಕೊಂಡು ಬಾ ಬಾಡಿಗೆ ಇದೆ, ಹೋಗಿ ಬರೋಣ ಎಂದು ಕರೆದುಕೊಂಡು ಹೋಗಿ ಸಿದ್ದೇಪಲ್ಲಿ ಕ್ರಾಸ್ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ನಡೆಸಿದ್ದಾನೆ. 

ವಿಜಯ್ ಚಾಕುವಿನಿಂದ ಮಾರೇಶ್ ಕತ್ತು ಸೀಳಿದ್ದು, ರಕ್ತ ಹೊರಚಿಮ್ಮಿದಾಗ ಅದನ್ನು ಕುಡಿದು ತನ್ನ ಕೋಪ ಪ್ರತಾಪ ತೀರಿಸಿಕೊಂಡಿದ್ದಾನೆ. ಈ ಘಟನೆ ಜೂನ್ 19ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಜಯ್ ಜೊತೆ ಇದ್ದ ಸ್ನೇಹಿತ ಈ ಕತ್ತು ಸೀಳಿ ರಕ್ತ ಕುಡಿಯುವ ವಿಡಿಯೋವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಯಾಬಿನ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ, ಪೈಲಟ್ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಗೆ ಶೀಘ್ರದಲ್ಲೇ ಆನೆ ಕಾರ್ಯಪಡೆ

ಕೇರಳದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ಭಾರೀ ಮಳೆ

ಧರ್ಮಸ್ಥಳ ಬುರುಡೆ ಪ್ರಕರಣ ಪ್ರಮುಖ ಹಂತದಲ್ಲಿರುವಾಗ ಮಹತ್ವದ ಬೆಳವಣಿಗೆ

ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದ ಪಾಪಿಗಳು, ಕ್ರಮಕ್ಕೆ ಒತ್ತಾಯ

ಮುಂದಿನ ಸುದ್ದಿ
Show comments