Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧ,ಗಂಡ ಹಾಗೂ ಲವರ್‌ನನ್ನು ಕಟ್ಟಿ, ತಲೆಬೋಳಿಸಿದ ಪತ್ನಿ

ಅಕ್ರಮ ಸಂಬಂಧ,ಗಂಡ ಹಾಗೂ ಲವರ್‌ನನ್ನು ಕಟ್ಟಿ, ತಲೆಬೋಳಿಸಿದ ಪತ್ನಿ
ಆಂಧ್ರಪ್ರದೇಶ , ಬುಧವಾರ, 6 ಸೆಪ್ಟಂಬರ್ 2023 (15:19 IST)
ಪತಿ ಹಾಗೂ ಆತನ ಲವರ್ ಇಬ್ಬರನ್ನೂ ಕಟ್ಟಿ ಹಾಕಿದ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಗ್ರಾಮದ ರಸ್ತೆ ರಸ್ತೆಗಳಲ್ಲಿ ಮೆರವಣಿಗೆ ಮಾಡಿರೋ  ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಪತ್ನಿಗೆ ಗಂಡನ ವಿವಾಹೇತರ ಸಂಬಂಧದ ಬಗ್ಗೆ ಅರಿವಿತ್ತು. ಇದನ್ನು ತನ್ನ ಕುಟುಂಬದವರಿಗೂ ಸಹ ತಿಳಿಸಿದ್ದಳು. ರೆಡ್ಹ್ಯಾಂಡ್ ಆಗಿ ಗಂಡ ಆತನ ಲವರ್ ಜೊತೆ ಸಿಕ್ಕಿ ಹಾಕಿಕೊಂಡ ಬಳಿಕ, ಇಬ್ಬರನ್ನೂ ಭಾಗಶಃ ಕಟ್ಟಿಹಾಕಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. 30 ವರ್ಷದ ಹುಸೇನ್,ಮತ್ತು ಹಸ್ನಾಬಾದ್ ಮೂಲದ 32 ವರ್ಷದ ಶಬಾನಾ ಎನ್ನುವ ಮಹಿಳೆಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಎನ್ನುವುದು ಹುಸೇನ್ನ ಪತ್ನಿ ನಜಿಯಾಗೆ ಗೊತ್ತಾಗಿತ್ತು. ಈ ಸಂಬಂಧ ತಿಳಿದ ನಾಜಿಯಾ ಮತ್ತು ಆಕೆಯ ಕುಟುಂಬಸ್ಥರು, ಹುಸೇನ್ ಹಾಗೂ ಶಬಾನಾರ ಕೈಗಳನ್ನು ಕಟ್ಟಿ ಜಿಲ್ಲೆಯ ಲೇಪಾಕ್ಷಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.ನಂತರ ಪೊಲಿಸ್ ಠಾಣೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಪತಿ ತಪ್ಪಿಸಿಕೊಂಡು ಹೋಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷ ಸಂಸತ್ ಅಧಿವೇಶನ : ಪ್ರಮುಖ ವಿಷಯಗಳ ಚರ್ಚೆಗೆ ಸೋನಿಯಾ ಗಾಂಧಿ ಆಗ್ರಹ