ಲಾಕ್ ಡೌನ್ ನಡುವೆ ಅಕ್ರಮ ಮರಳು ಸಾಗಾಟ; ಪ್ರಾಣ ಬಿಟ್ಟ ಚಾಲಕ

Webdunia
ಭಾನುವಾರ, 24 ಮೇ 2020 (18:37 IST)
ಕೊರೊನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದ್ದು, ಕರ್ಫ್ಯೂ ಹೇರಲಾಗಿದೆ. ಈ ವೇಳೆ ಅಕ್ರಮ ಮರಳು ಸಾಗಿಸುವಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಚಾಲಕ ಮೃತಪಟ್ಟಿದ್ದಾನೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದ ಬಳಿ ಘಟನೆ ನಡೆದಿದ್ದು‌, ಮೃತ ಚಾಲಕನನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಗುಳಗುಳಿ ಗ್ರಾಮದ ದೇವೇಂದ್ರಪ್ಪ ಅಲಿಯಾಸ್ ಕುಮಾರ ತಂದೆ ಮಲ್ಲಿಕಾರ್ಜುನ ಕೋಣನ್ನವರ್ (35) ಎಂದು ಗುರುತಿಸಲಾಗಿದೆ.

ಸುಮಾರು‌ 6 ಜನರು ಅಕ್ರಮವಾಗಿ ಮರಳು ಸಾಗಿಸಲು ಯತ್ನಿಸಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ಇರುವುದರಿಂದ ಪೊಲೀಸರ ಕಣ್ತಪ್ಪಿಸಿ, ಗುಳಗುಳಿ ಹಳ್ಳದ ದಡದಿಂದ ರಸ್ತೆ ಮೇಲೆ ಟ್ರ್ಯಾಕ್ಟರ್ ಹತ್ತಿಸುವಾಗ ಎತ್ತರದ ಪ್ರದೇಶವಾದದ್ದರಿಂದ ಟ್ರ್ಯಾಕ್ಟರ್ ಮುಗುಚಿ ಚಾಲಕ ದೇವೇಂದ್ರಪ್ಪ ಅಲಿಯಾಸ್ ಕುಮಾರ್‌ನ ಮೇಲೆ ಬಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ‌ ನೋಡಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೈಕಮಾಂಡ್‌ನಲ್ಲಿ ಕೆಲ ಶಾಸಕರ ಶಕ್ತಿಪ್ರದರ್ಶನ, ಕೊನೆಗೂ ಮೌನ ಮುರಿದ ಡಿಕೆ ಶಿವಕುಮಾರ್

ಶಕ್ತಿ ಪ್ರದರ್ಶನಕ್ಕೆ ಜೈಲಿಗೂ ಕಾಲಿಟ್ರಾ ಡಿಕೆ ಶಿವಕುಮಾರ್, ಭಾರೀ ಬೆಳವಣಿಗೆ

ಕಾಂಗ್ರೆಸ್ ಸರಕಾರ ಹೋಳು; ಜನರ ಪಾಲಿಗೆ ಗೋಳು, ರೈತರಿಗೆ ಹೂಳು: ಆರ್.ಅಶೋಕ್ ಟೀಕೆ

ಸಹೋದ್ಯೋಗಿಯೊಂದಿಗಿನ ಆಫೇರ್‌ನಿಂದ 150 ಕೋಟಿ ಸಂಬಳದ ಕೆಲಸ ಕಳೆದುಕೊಂಡ ವ್ಯಕ್ತಿ

ಡಿಕೆಶಿ ಶಕ್ತಿಪ್ರದರ್ಶನದ ಬೆನ್ನಲ್ಲೇ ನನ್ನದು ಕಾಂಗ್ರೆಸ್ ಬಣ ಎಂದ ರಾಮಲಿಂಗಾ ರೆಡ್ಡಿ

ಮುಂದಿನ ಸುದ್ದಿ
Show comments