ಹಣ ಕೊಟ್ಟರೆ ಅಕ್ಕಿ ಸಿಗುತ್ತೆ, ಹಣ ಹಾಕಿ

Webdunia
ಗುರುವಾರ, 15 ಜೂನ್ 2023 (17:20 IST)
ಅಕ್ಕಿ ರಾಜಕೀಯದಲ್ಲಿ ಕೇಂದ್ರದ ಮೇಲೆ ಕಾಂಗ್ರೆಸ್ ಆರೋಪ ಹಿನ್ನೆಲೆ ಮಾಜಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಅಕ್ಕಿ ಕಳಿಸುತ್ತೇವೆ ನಿಮ್ಮ ಹೆಸರು ಹಾಕ್ಕೊಂಡು ಕೊಡಿ ಅಂತ ಲೆಟರ್ ಕಳಿಸಿಲ್ಲ. ಎಲ್ಲಿದೆ ಕಮಿಟ್ಮೆಂಟ್ ಲೆಟರ್ ತೋರಿಸಲಿ. FCI ನಿಮಗೆ ಅಗತ್ಯ ಇರೋವಷ್ಟು ಅಕ್ಕಿ ಕಳಿಸುತ್ತೇವೆ ಎಂದು ಹೇಳಿದ್ದಾರಾ, ಲೆಟರ್ ತೋರಿಸಿ. ತನ್ನ ಕೈನಲ್ಲಿ ಆಗದಿರುವುದಕ್ಕೆ ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಈಗಲೇ ಶುರು ಮಾಡಿದ್ದಾರೆ. 4-5 ತಿಂಗಳ ಬಳಿಕ ಎಂದು ಭಾವಿಸಿದ್ದೆ. ಆದ್ರೆ, ಆರೋಪ ಮಾಡುವುದನ್ನು ಈಗಲೇ ಶುರು ಮಾಡಿದ್ದಾರೆ. ಜುಲೈ 1ರಿಂದ ಅಕ್ಕಿ ಉಚಿತ ಎಂದು ಭಾಷಣ ಮಾಡಿದ್ರು. ಈಗ ಕೇಂದ್ರದ ಮೇಲೆ ಆರೋಪ ಮಾಡ್ತಿದ್ದಾರೆ. ನೀವು ಎಲ್ಲಾ ಬಿ.ಪಿ.ಎಲ್.ದಾರರ ಖಾತೆಗೆ ಹಣ ಹಾಕಿ, ಅವರೇ ಅಕ್ಕಿ ಕೊಂಡುಕೊಳ್ಳುತ್ತಾರೆ. ಆಕಾಶವೇನು ಕಳಚಿ ಬಿದ್ದಿಲ್ಲ, ಹಣ ಕೊಟ್ಟರೆ ಅಕ್ಕಿ ಸಿಗುತ್ತೆ, ಮೊದಲು ಹಣ ಹಾಕಿ. ಕೊಟ್ಟರೆ ನಾನು ಕೊಟ್ಟೆ ಅನ್ನೋದು, ಕೊಡದಿದ್ದರೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಎಂದು ವಾಗ್ದಾಳಿ ನಡೆಸಿದ್ಧಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಸ್ಟ್ ಫಿನ್ಟೆಕ್ ಇನ್ಶುರೆನ್ಸ್ ಅವಾರ್ಡ್ ಪಡೆದ ಡಿಜಿಟ್ ಇನ್ಶುರೆನ್ಸ್

ಗರ್ಭಿಣಿಯರು ಮಲಬದ್ಧತೆಯಾದರೆ ಏನು ಮಾಡಬೇಕು

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಭಾರತಕ್ಕೆ ಈಗ ಯಾರೂ ಫ್ರೆಂಡ್ಸ್ ಇಲ್ಲ, ಯುದ್ಧ ನಡೆದರೆ ನಾವೇ ಗೆಲ್ಲೋದು: ಪಾಕಿಸ್ತಾನ ಸಚಿವ ಆಸಿಫ್

ಮುಂದಿನ ಸುದ್ದಿ
Show comments