Select Your Language

Notifications

webdunia
webdunia
webdunia
webdunia

ಮೋದಿಯನ್ನು ನಂಬಿ ಹೋದ್ರೆ 4 ಮತ ಬರಲ್ಲ: ಮಧು ಬಂಗಾರಪ್ಪ

ಮೋದಿಯನ್ನು ನಂಬಿ ಹೋದ್ರೆ 4 ಮತ ಬರಲ್ಲ: ಮಧು ಬಂಗಾರಪ್ಪ
ಬೆಂಗಳೂರು , ಸೋಮವಾರ, 10 ಏಪ್ರಿಲ್ 2017 (15:17 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ನಂಬಿದರೆ ನಾಲ್ಕು ಮತಗಳು ದೊರೆಯುವುದಿಲ್ಲ ಎಂದು ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.
 
ಯಡಿಯೂರಪ್ಪ ರಾಜ್ಯದ ಜನತೆಯ ಸಂಕಷ್ಟಗಳನ್ನು ಮರೆತು ಉಪಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ. ರಾಜ್ಯದಲ್ಲಿ ಮುಂದೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.
 
ಭಿನ್ನಮತೀಯರಿಗೆ ಜೆಡಿಎಸ್ ಪಕ್ಷದ ಬಾಗಿಲು ಬಂದ್ ಆಗಿದೆ. ಯಾವುದೇ ಕಾರಣಕ್ಕೂ ಬಂಡಾಯ ಶಾಸಕರನ್ನು ಪಕ್ಷಕ್ಕೆ ಆಹ್ವಾನಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಜೆಡಿಎಸ್ ಪಕ್ಷದಲ್ಲಿಯೇ ಮುಂದುವರಿಯುತ್ತೇನೆ ಎಂದು ಜೆಡಿಎಸ್ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಗಳಲ್ಲಿ ಆಕ್ರಮ ಆರಂಭಿಸಿದ್ದೇ ಯಡಿಯೂರಪ್ಪ: ಸಿಎಂ ಸಿದ್ದರಾಮಯ್ಯ