ಭಾನುವಾರ ಸಂಭವಿಸುವ ಸೂರ್ಯಗ್ರಹಣ ಸಮಯದಲ್ಲಿ ಮೂಢನಂಬಿಕೆಯಿಂದ ವಿಕಲಚೇತನ ಮಕ್ಕಳನ್ನು ಭೂಮಿಯಲ್ಲಿ ಹೂಳಬಾರದು.
ಕಲಬುರಗಿ ಜಿಲ್ಲೆಯಾದ್ಯಂತ ವಿಕಲಚೇತನ ಮಕ್ಕಳನ್ನು ಭೂಮಿಯಲ್ಲಿ ಹೂಳದಂತೆ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿ ಸಾರ್ವಜನಿಕರು ಯಾರಾದರು ವಿಕಲಚೇತನ ಮಕ್ಕಳನ್ನು ಭೂಮಿಯಲ್ಲಿ ಹೂಳಿದಲ್ಲಿ ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಸಾರ್ವಜನಿಕರು ಅವೈಜ್ಞಾನಿಕವಾದ ಹೂಳುವ ರೂಢಿಯನ್ನು ಕೈಬಿಡಬೇಕು. ಕಳೆದ ವರ್ಷದ ಕಲಬುರಗಿ ನಗರದ ತಾಜ ಸುಲ್ತಾನಪೂರದಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿದ್ದು, ಜಿಲ್ಲಾಡಳಿತದ ಗಮನಕ್ಕಿದೆ. ಭಾನುವಾರ ನಡೆಯುವ ಸೂರ್ಯಗ್ರಹಣ ದಿನದಂದು ಯಾವುದೇ ಕಾರಣಕ್ಕೂ ಇದು ಮರುಕಳಿಸಬಾರದೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.