Select Your Language

Notifications

webdunia
webdunia
webdunia
webdunia

ಜೆಡಿಎಸ್ ಅಧಿಕಾರಕ್ಕೆ ಬಂದರೆ 24ಗಂಟೆಯೊಳಗೆ ರೈತರ ಸಾಲ ಮನ್ನಾ: ಕುಮಾರಸ್ವಾಮಿ

ಜೆಡಿಎಸ್ ಅಧಿಕಾರಕ್ಕೆ ಬಂದರೆ 24ಗಂಟೆಯೊಳಗೆ ರೈತರ ಸಾಲ ಮನ್ನಾ: ಕುಮಾರಸ್ವಾಮಿ
ಬೆಂಗಳೂರು , ಶುಕ್ರವಾರ, 14 ಅಕ್ಟೋಬರ್ 2016 (16:55 IST)
ಜೆಡಿಎಸ್ ಅಧಿಕಾರಕ್ಕೆ ಬಂದರೆ 24ಗಂಟೆಯೊಳಗೆ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ  ಎಚ್. ಡಿ ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ. 
ಸಾಲಕ್ಕೆ ಬೆದರಿ ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬೇಡಿ. ನಿಮ್ಮ ಕಷ್ಟಸುಖದಲ್ಲಿ ನಾನಿದ್ದೇನೆ ಎಂದು ರೈತರಲ್ಲಿ ಮನವಿ ಮಾಡಿಕೊಂಡ ಕುಮಾರಸ್ವಾಮಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮ ಸಾಲವನ್ನು 24 ಗಂಟೆಯೊಳಗೆ ಮನ್ನಾ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು. 
 
ನವೆಂಬರ್ 1 ರಿಂದ ರಾಜಕೀಯ ಹೋರಾಟ ಆರಂಭಿಸುತ್ತೇನೆ ಎಂದ ಸ್ವಾಮಿ, ನೀವು ಎರಡು ರಾಷ್ಟ್ರೀಯ ಪಕ್ಷಗಳ ಕಾರ್ಯವೈಖರಿಯನ್ನು ಕಂಡಿದ್ದಿರಿ. ನನ್ನ ಅಧಿಕಾರಾವಧಿಯ ಕೆಲಸವನ್ನು ನೋಡಿದ್ದಿರಿ. ಮತ್ತೀಗ ಯಾರಿಗೆ ಅಧಿಕಾರವನ್ನು ಕೊಡಿಸುವುದು ಎಂದು ನೀವೇ ನಿರ್ಧರಿಸಿ ಎಂದಿದ್ದಾರೆ.
 
ಗ್ರಾಮೀಣ ಭಾಗದ ಜನರು ಜೆಡಿಎಸ್‌ಗೆ ಮತ ನೀಡಲು ಉತ್ಸುಕರಾಗಿದ್ದಾರೆ. ಉತ್ತರ ಕರ್ನಾಟತಕ ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ಗುರಿ ನಮ್ಮದು. ಹುಬ್ಬಳ್ಳಿಯಲ್ಲಿ ಮನೆ ಮಾಡಿ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಶಕ್ತಿ ತುಂಬುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮಿಶೆಲ್ ಒಬಾಮಾರನ್ನು ಹೊಗಳಿದ ಪ್ರಿಯಾಂಕಾ ಚೋಪ್ರಾ: ಯಾಕೆ ಗೊತ್ತಾ?