Select Your Language

Notifications

webdunia
webdunia
webdunia
webdunia

ಜಯಾ ಸರಕಾರಕ್ಕೆ ಯೋಗ್ಯತೆ ಇದ್ರೆ ಡ್ಯಾಂ ಕಟ್ಟಲಿ: ಜಗ್ಗೇಶ್

ಜಯಲಲಿತಾ
ಬೆಂಗಳೂರು , ಶುಕ್ರವಾರ, 9 ಸೆಪ್ಟಂಬರ್ 2016 (13:07 IST)
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಸರಕಾರಕ್ಕೆ ಯೋಗ್ಯತೆ ಇದ್ರೆ ಡ್ಯಾಂ ಕಟ್ಟಿಕೊಳ್ಳಲಿ ಎಂದು ಹಿರಿಯ ನಟ ಜಗ್ಗೇಶ್ ಸಲಹೆ ನೀಡಿದ್ದಾರೆ.
 
ಕರ್ನಾಟಕ ಬಂದ್ ಅಂಗವಾಗಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಕಾವೇರಿ ನೀರು ಬಿಡುಗಡೆ ಕುರಿತಂತೆ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಸರಕಾರಕ್ಕೆ ಒಂದೂ ಡ್ಯಾಂ ಕಟ್ಟೋಕೂ ಯೋಗ್ಯತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ರಾಜ್ಯದ ಜನತೆಗೆ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಕೋರುವುದು ಯಾವ ನ್ಯಾಯ. ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಸರಕಾರದೊಂದಿಗೆ ನಾವಿದ್ದೇವೆ ಎಂದು ಗುಡುಗಿದರು.
 
ಕಲಾವಿದರು ಸದಾ ರಾಜ್ಯದ ಹಿತಾಸಕ್ತಿಗೆ ಬದ್ಧರಾಗಿದ್ದೇವೆ. ಕೆಲ ಅನಿವಾರ್ಯ ಕಾರಣಗಳಿಂದ ಪ್ರತಿಭಟನೆಗೆ ಆಗಮಿಸದ ಕಲಾವಿದರ ವಿರುದ್ಧ ಘೋಷಣೆಗಳನ್ನು ಕೂಗಬೇಡಿ. ನಮಗೂ ಕೆಲ ಸಮಸ್ಯೆಗಳಿರುತ್ತವೆ ಎನ್ನುವುದನ್ನು ಅರಿಯಿರಿ ಎಂದು ಮನವಿ ಮಾಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿವಾದದಲ್ಲಿ ಸಿದ್ದರಾಮಯ್ಯ ಬಂಗಾರಪ್ಪ ದಾರಿ ಅನುಸರಿಸಲಿ: ಶಿವಣ್ಣ