Select Your Language

Notifications

webdunia
webdunia
webdunia
Monday, 14 April 2025
webdunia

ತನಿಖೆ ನಡೆಸಿದರೆ ದೊಡ್ಡ ತಿಮಿಂಗಲುಗಳ ಬಣ್ಣ ಬಯಲಾಗುತ್ತದೆ: ಕುಮಾರಸ್ವಾಮಿ

ಕನ್ನಡ ಪ್ರಾದೇಶಿಕ
ಬೆಂಗಳೂರು , ಬುಧವಾರ, 24 ಆಗಸ್ಟ್ 2016 (15:29 IST)
ಸಿಎಸ್ ಅರವಿಂದ ಜಾಧವ್ ವಿರುದ್ಧ ಭೂ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆಳಕ್ಕೆ ಹೋದರೆ ಮತ್ತಷ್ಟು ಅಧಿಕಾರಿಗಳ ಬಣ್ಣ ಬಯಲಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾರತದಿಂದ ಬರುವ ಅಧಿಕಾರಿಗಳು ಕರ್ನಾಟಕ ಹಾಗೂ ತಮ್ಮ ತವರೂರಿನಲ್ಲಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಈ ಕುರಿತು ಆಳವಾಗಿ ತನಿಖೆ ನಡೆಸಿದರೆ ದೊಡ್ಡ ತಿಮಿಂಗಲುಗಳ ಬಣ್ಣ ಬಯಲಾಗುತ್ತದೆ. ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದರು.
 
ನಟ ಪವನ್‌ಕಲ್ಯಾಣ ಭೇಟಿ........
 
ಚೆನ್ನಾಂಬಿಕಾ ಫಿಲಂ ಬ್ಯಾನರ್‌ನಲ್ಲಿ ಚಿತ್ರ ನಿರ್ಮಿಸಲು ನಟ ಪವನ್‌ಕಲ್ಯಾಣ ಒಪ್ಪಿಕೊಂಡಿದ್ದಾರೆ. ಚಿತ್ರರಂಗ ಹಾಗೂ ರಾಜಕೀಯ ಕುರಿತು ಅವರ ಜೊತೆ ಚರ್ಚೆ ನಡೆಸಿದ್ದೇನೆ. ಸೂಕ್ತ ಸಮಯದಲ್ಲಿ ಈ ಕುರಿತು ಬಹಿರಂಗ ಪಡಿಸುತ್ತೇನೆ ಎಂದರು.
 
ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ......
 
ಚುನಾವಣೆಯಲ್ಲಿ ಮೇಯರ್ ಚುನಾವಣೆ ಮೈತ್ರಿಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಈ ಕುರಿತು 4-5 ದಿನಗಳಲ್ಲಿ ಸ್ಪಷ್ಟಪಡಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ, ಪುತ್ರಿಯ ಸಜೀವ ದಹನಕ್ಕೆ ಯತ್ನಿಸಿದ ಪತಿ ಮಹಾಶಯ