ತೆಲಂಗಾಣದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಬಿಆರ್‌ಎಸ್ ಪಕ್ಷದ ಭ್ರಷ್ಟರನ್ನು ಜೈಲಿಗೆ ಕಳುಹಿಸಲಾಗುವುದು. ಮುಖ್ಯಮಂತ್ರಿ ಕೆಸಿಆರ್ ಭಾಗಿ ಆಗಿರುವ ಯಾವುದೇ ಹಗರಣ ಇರಲಿ, ಬಿಜೆಪಿ ಸರ್ಕಾರ ಅವುಗಳ ತನಿಖೆ ನಡೆಸಲಿದೆ. ಆ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆದ ಬಿಆರ್‌ಎಸ್ ಪಕ್ಷದ ಹಿಡಿತದಿಂದ ರಾಜ್ಯವನ್ನು ಮುಕ್ತಗೊಳಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.