Select Your Language

Notifications

webdunia
webdunia
webdunia
webdunia

ಎಂಆರ್‌ಎಫ್ ಟೈರ್ಸ್ ಜತೆ ಐಸಿಸಿ 4ವರ್ಷಗಳ ಸಹಭಾಗಿತ್ವ

ಎಂಆರ್‌ಎಫ್ ಟೈರ್ಸ್ ಜತೆ ಐಸಿಸಿ  4ವರ್ಷಗಳ ಸಹಭಾಗಿತ್ವ
ಚೆನ್ನೈ , ಗುರುವಾರ, 21 ಜನವರಿ 2016 (15:59 IST)
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಲಿ(ಐಸಿಸಿ) ಮತ್ತು ಎಂಆರ್‌ಎಫ್ ಟೈರ್ಸ್ ಬುಧವಾರ ನಾಲ್ಕು ವರ್ಷಗಳ ಒಪ್ಪಂದವನ್ನು ಪ್ರಕಟಿಸಿದ್ದು, ಒಪ್ಪಂದದ ಪ್ರಕಾರ  2016ರಿಂದ ಐಸಿಸಿ ಈವೆಂಟ್‌ಗಳಿಗೆ ಎಂಆರ್‌ಎಫ್‌ನ ಜಾಗತಿಕ ಪಾಲುದಾರಿಕೆಯನ್ನು ದೃಢಪಡಿಸಿದೆ.

ಎಂಆರ್‌ಎಫ್ ಟೈರ್ಸ್ ಮುಖ್ಯಕಚೇರಿಯಿರುವ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಕಟಣೆಯನ್ನು ನೀಡಲಾಗಿದ್ದು, ಐಸಿಸಿ ಮುಖ್ಯ ಎಕ್ಸಿಕ್ಯೂಟಿವ್ ಡೇವಿಡ್ ರಿಚರ್ಡ್‌ಸನ್ , ಎಂಆರ್‌ಎಫ್ ಟೈರ್ಸ್ ಅಧ್ಯಕ್ಷ ಕೆಎಂ ಮಾಮ್ಮೇನ್ ಮತ್ತು ಮಾಜಿ ಕ್ರಿಕೆಟ್ ತಾರೆ ಎಂಆರ್‌ಎಫ್ ಬ್ರಾಂಡ್ ರಾಯಭಾರಿ ಸಚಿನ್ ತೆಂಡೂಲ್ಕರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
 ಐಸಿಸಿ ಮತ್ತು ಎಂಆರ್‌ಎಫ್ 2015ರ ವಿಶ್ವಕಪ್‌ನಲ್ಲಿ ಸಹಭಾಗಿತ್ವವನ್ನು ಹೊಂದಿತ್ತು.

ಈ ಸಹಭಾಗಿತ್ವ ಕುರಿತು ಪ್ರತಿಕ್ರಿಯಿಸಿದ ರಿಚರ್ಡ್‌ಸನ್ ಎಂಆರ್‌ಎಫ್ ಟೈರ್ಸ್ ಐಸಿಸಿ ಜತೆ ಇನ್ನೂ ನಾಲ್ಕು ವರ್ಷಗಳ ಕಾಲ ಸಹಭಾಗಿತ್ವ ವಿಸ್ತರಿಸುವ ಮೂಲಕ ಕ್ರಿಕೆಟ್‌ಗೆ ಬೆಂಬಲವನ್ನು ಮುಂದುವರಿಸಿದ್ದು ತಮಗೆ ಸಂತಸವಾಗಿದೆ ಎಂದು ರಿಚರ್ಡ್‌ಸನ್ ಹೇಳಿದರು.
 
ಸಚಿನ್ ತೆಂಡೂಲ್ಕರ್ ಅವರಿಗೆ ಶಹಭಾಷ್‌ಗಿರಿ ಹೇಳಿದ ರಿಚರ್ಡ್‌ಸನ್, ಸಚಿನ್ ಮಹಾನ್ ಆಟಗಾರರ ಪೈಕಿ ಒಬ್ಬರಾಗಿದ್ದು, ಕ್ರೀಡಾ ಮನೋಭಾವದಿಂದ ಆಟವನ್ನು ಆಡಿದವರಲ್ಲಿ ಒಬ್ಬರಾಗಿದ್ದಾರೆ ಎಂದು ಶ್ಲಾಘಿಸಿದರು. 

Share this Story:

Follow Webdunia kannada