Select Your Language

Notifications

webdunia
webdunia
webdunia
webdunia

ವಿ.ಎಸ್.ಉಗ್ರಪ್ಪನ ಕೃಪೆಯಿಂದ ಸಭಾಪತಿಯಾಗಿಲ್ಲ: ಶಂಕರ್‌ಮೂರ್ತಿ

ವಿ.ಎಸ್.ಉಗ್ರಪ್ಪನ ಕೃಪೆಯಿಂದ ಸಭಾಪತಿಯಾಗಿಲ್ಲ: ಶಂಕರ್‌ಮೂರ್ತಿ
ಬೆಂಗಳೂರು , ಶನಿವಾರ, 3 ಜೂನ್ 2017 (14:04 IST)
ವಿಧಾನಪರಿಷತ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪನ ಕೃಪೆಯಿಂದ ಸಭಾಪತಿಯಾಗಿಲ್ಲ ಎಂದು ಸಭಾಪತಿ ಡಿ.ಎಚ್.ಶಂಕರ್‌ಮೂರ್ತಿ ಗುಡುಗಿದ್ದಾರೆ.
 
ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಬೆಂಬಲದಿಂದ ಸಭಾಪತಿಯಾಗಿದ್ದೇನೆ. ಉಗ್ರಪ್ಪನ ಕೃಪೆ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಸಭಾಪತಿ ಇಚ್ಚೆಪಟ್ಟದಿನ ಅವಿಶ್ವಾಸ ನಿರ್ಣಯ ಮಂಡನೆ ಚರ್ಚೆಯಾಗುತ್ತದೆ. ತದ ನಂತರ ಸಭೆ ಒಪ್ಪಿದಲ್ಲಿ ಐದು ದಿನಗಳೊಳಗಾಗಿ ಒಂದು ದಿನ ನಿರ್ಣಯ ಮಂಡನೆಗೆ ಅವಕಾಶ ದೊರೆಯಲಿದೆ ಎಂದು ತಿಳಿಸಿದ್ದಾರೆ.
 
ಸಭಾಪತಿ ಡಿ.ಎಚ್.ಶಂಕರ್‌ಮೂರ್ತಿಯವರ ಕಾರ್ಯವೈಖರಿ ಅಸಮಾಧಾನ ತಂದಿದೆ ಎಂದು ಆರೋಪಿಸಿ ಉಗ್ರಪ್ಪ, ಸಭಾಪತಿ ವಿರುದ್ಧ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಯಣ್ಣ ಬ್ರಿಗೇಡ್‌ ಪದಾಧಿಕಾರಿಗಳಿಗೆ ಬಿಜೆಪಿಯಲ್ಲಿ ಸ್ಥಾನ: ಈಶ್ವರಪ್ಪ