ನಾನು ಬಸವಣ್ಣನವರ ಅನುಯಾಯಿ. ಜಾತ್ಯಾತೀತವಾದದಲ್ಲಿ ನಂಬಿಕೆ ಇಟ್ಟವನಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಅರಮನೆ ಮೈದಾನದಲ್ಲಿ ನಡೆದ ವೀರಶೈವ ಸಮಾವೇಶದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ, ಶ್ರೇಣಿಕೃತ ಸಮಾಜ ನಾಶವಾಗಬೇಕು. ಮೂಢನಂಬಿಕೆಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.
ಚಾಮರಾಜನಗರಕ್ಕೆ ಹೋದರೆ ಸಿಎಂ ಸ್ಥಾನ ಹೋಗುತ್ತದೆ ಎನ್ನುವ ಮೂಢನಂಬಿಕೆ ಪ್ರತಿಯೊಬ್ಬ ಮುಖ್ಯಮಂತ್ರಿಯನ್ನು ಕಾಡಿತ್ತು. ಆದರೆ,. ನಾನು ಚಾಮರಾಜನಗರಕ್ಕೆ 11 ಬಾರಿ ಹೋಗಿ ಬಂದ ನಂತರವೇ ನನ್ನ ಸೀಟು ಗಟ್ಟಿ ಆಗಿದ್ದು ಎಂದರು.
ಬಸವಣ್ಣನವರು ಎಂದೂ ಮೂಢನಂಬಿಕೆ ಬಿತ್ತರಿಸಲಿಲ್ಲ. ಕಾರಿನ ಮೇಲೆ ಕಾಗೆ ಕುಳಿತರೆ ಶನಿ ಹೆಗಲೇರುತ್ತದೆ ಎಂದು ಹೇಳುತ್ತಿದ್ದರು. ಅನೇಕ ಮಾಧ್ಯಮಗಳು ಇದರ ಬಗ್ಗೆ ತುಂಬಾ ಚರ್ಚೆ ನಡೆದವು ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊ
ಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.