Publish Date: Mon, 04 Sep 2017 (10:48 IST)
Updated Date: Mon, 04 Sep 2017 (10:50 IST)
ಬೆಂಗಳೂರು: ನೂರಾರು ಕೋಟಿ ರೂ. ಬೇನಾಮಿ ಆಸ್ತಿ ಹೊಂದಿದ್ದಾರೆಂದು ತಮ್ಮ ವಿರುದ್ಧ ಆರ್ ಟಿ ಐ ಕಾರ್ಯಕರ್ತ ರಾಮಮೂರ್ತಿ ನೀಡಿದ ದೂರಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ‘ಅಯ್ಯೋ… ಯಾರೋ ನೀಡಿದ ಸುಳ್ಳು ದೂರಿಗೆಲ್ಲಾ ಹೆದರುತ್ತಾ ಕೂರಕ್ಕಾಗುತ್ತಾ?’ ಎಂದು ಪ್ರತಿಕ್ರಿಯಿಸಿದ್ದಾರೆ.
ಐಟಿಯವರು ತನಿಖೆ ನಡೆಸಲಿ ಆಮೇಲೆ ನೋಡೋಣ ಏನಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆರ್ ಟಿಐ ಕಾರ್ಯಕರ್ತ ರಾಮಮೂರ್ತಿ ಮುಖ್ಯಮಂತ್ರಿ ನೂರಾರು ಕೋಟಿ ರೂ. ಬೇನಾಮಿ ಆಸ್ತಿ ಹೊಂದಿದ್ದಾರೆಂದು 1638 ಪುಟಗಳ ವರದಿಯನ್ನು ಐಟಿ ಇಲಾಖೆಗೆ ಸಲ್ಲಿಸಿದ್ದರು.
ಇದಕ್ಕೆ ಸ್ಪಂದಿಸಿರುವ ಐಟಿ ಇಲಾಖೆ ಸಿಎಂ ವಿರುದ್ಧ ತನಿಖೆಗೆ ಮುಂದಾಗಿದೆ. ಇದರ ಬಗ್ಗೆ ಐಟಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
Krishnaveni
Publish Date: Mon, 04 Sep 2017 (10:48 IST)
Updated Date: Mon, 04 Sep 2017 (10:50 IST)