ಜೆಡಿಎಸ್ ಪರವಾಗಿ ನಾನು ಇದ್ದೇನೆ...!!!

Webdunia
ಗುರುವಾರ, 4 ನವೆಂಬರ್ 2021 (17:20 IST)
ದೀಪಾವಳಿ ಹಿನ್ನೆಲೆ ರಾಜ್ಯ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ. ಈ ಪೂಜೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹೆಚ್​ಡಿ ದೇವೇಗೌಡ ಸುದ್ದಿಗೋಷ್ಟಿ ನಡೆಸಿದರು.ಪ್ರಧಾನಿ ಹೆಚ್.​ಡಿ.ಡಿ 2023 ಕ್ಕೆ ಚುನಾವಣೆಗೆ ನಾನು ಆಕ್ಟೀವ್ ಆಗಿ ಕೆಲಸ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇನೆ ಎಂದರು. ಅಲ್ಲದೆ ಪಕ್ಷದ ಉಳಿದ ನಾಯಕರಿಗೂ ಆಕ್ಟೀವ್ ಆಗಿ ಕೆಲಸ ಮಾಡಬೇಕು ಎಂದು ಆದೇಶಿಸಿದ್ದಾರಂತೆ. ಅಕ್ಟೋಬರ್ 8 ರಿಂದ ಎರಡನೇ ಹಂತದ ಕಾರ್ಯಗಾರ ನಡೆಯಲಿದ್ದು , ಅಲ್ಲಿಂದ ಕಾರ್ಯಕ್ರಮ ಹಾಗೆಯೇ ಮುಂದುವರೆಯಲಿದೆ ಎಂದರು. ಉಪ ಚುನಾವಣೆಯ ಫಲಿತಾಂಶವನ್ನ ಸ್ವೀಕಾರ ಮಾಡ್ತೀವಿ ಅಂದ ದೊಡ್ಡ ಗೌಡ್ರು, ಜನರ ತೀರ್ಮಾನದಂತೆ ಹೋಗ್ತೀವಿ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹಣದಿಂದ ಬಲಿಷ್ಟವಾಗಿವೆ. ಪಕ್ಷ ಕಟ್ಟೋದಕ್ಕೆ ಆರ್ಥಿಕ ಶಕ್ತಿ ಮುಖ್ಯವಾಗಿದ್ದು. ಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಎಲ್ಲ ನಾಯಕರು ಜವಾಬ್ದಾರಿಯನ್ನ ಹೊರಬೇಕು ಎಂದು ದೇವೇಗೌಡರು ತಿಳಿಸಿದರು..

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾತು ಕೊಟ್ಟಂತೆ ನಡೆದ ಸರ್ಕಾರ: ಮಹಂತೇಶ ಬೀಳಗಿ ಪುತ್ರಿಗೆ ಕೊನೆಗೂ ಸಿಕ್ತು ಕೆಲಸ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಗೋಪಿನಾಥ್ ಮುಂಡೆ, ಪ್ರಮೋದ್ ಮಹಾಜನ್, ಈಗ ಅಜಿತ್ ಪವಾರ: ಮಹಾರಾಷ್ಟ್ರಕ್ಕೆ ಇದ್ಯಾರ ಶಾಪ

ಹಿಮದಲ್ಲಿ ಹೂತು ಹೋಗಿದ್ದ ಮಾಲಿಕನ ಮೃತದೇಹಕ್ಕೆ ಮೂರು ದಿನ ಕಾವಲು ನಿಂತ ನಾಯಿ Video

ಮುಂದಿನ ಸುದ್ದಿ
Show comments