Select Your Language

Notifications

webdunia
webdunia
webdunia
webdunia

‌ನನ್ನ ದೇಶದವರನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ: ಸ್ಯಾಮ್ ಪಿತ್ರೋಡಾ ಹೇಳಿಕೆ ಮೋದಿ ತಿರುಗೇಟು

Modi

Sampriya

ಹೈದರಾಬಾದ್ , ಬುಧವಾರ, 8 ಮೇ 2024 (16:29 IST)
ಹೈದರಾಬಾದ್:  ಚರ್ಮದ ಆಧಾರದಲ್ಲಿ ನನ್ನ ದೇಶದವರನ್ನು ಅವಮಾನಿಸುವುದು ನಾನು ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಯಾಮ್ ಪಿತ್ರೋಡಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ವಿವಾದಾತ್ಮಕ ಹೇಳಿಕೆ ನೀಡಿ, ದೇಶದ ಪೂರ್ವ ಭಾಗದ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮ ಭಾಗದವರು ಅರಬ್​ರಂತೆ, ಉತ್ತರ ಭಾಗದವರು ಬಿಳಿಯರಂತೆ ಹಾಗೂ ದಕ್ಷಿಣ ಭಾರತದ ಜನರು ಆಫ್ರಿಕಾದವರಂತೆ ಕಾಣುತ್ತಾರೆ ಎಂದು ಹೇಳಿ ಕಿಡಿ ಹೊತ್ತಿಸಿದ್ದರು.

ಈ ಸಂಬಂಧ ತೆಲಂಗಾಣದ ವಾರಂಗಲ್​ನಲ್ಲಿ ಸಾರ್ವಜನಿಕ ಸಮಾವೇಶವಮನ್ನುದ್ದೇಶಿಸಿ ಮಾತನಾಡಿ ತಿರುಗೇಟು ನೀಡಿದ ಮೋದಿ ಅವರು, ಅಮೆರಿಕದ ಅಂಕಲ್ ಚರ್ಮದ ಆಧಾರದ ಮೇಲೆ ಭಾರತೀಯರನ್ನು ನಿಂದಿಸಿದ್ದು ತಪ್ಪು ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್​ನವರು ದೇಶದ ಜನರನ್ನು ಅವರ ಬಣ್ಣದ ಆಧಾರದ ಮೇಲೆ ಅವಮಾನಿಸುತ್ತಿದ್ದಾರೆ. ಕಾಂಗ್ರೆಸ್‌ನವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕೆ ಅವಮಾನಿಸುತ್ತಿದ್ದಾರೆ ಎಂದು ಈಗ ನನಗೆ ಅರ್ಥವಾಗುತ್ತಿದೆ ಎಂದು ತಿರುಗೇಟು ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಂತ್ರಸ್ತೆಯ ಅಪಹರಣ: ರೇವಣ್ಣ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್‌