ಈ ಬಾರಿಯೂ ಸಿಎಂ ಸ್ವಂತ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂಬ ವಂದತಿ ಎದ್ದಿದ್ದು ,ಈಗ ಸಿಎಂ ಸ್ವಂತ ಕ್ಷೇತ್ರದಲ್ಲಿ ಸ್ಪರ್ಧೆ ಇಲ್ಲ ಎಂಬ ವದಂತಿಗೆ ಬ್ರೇಕ್ ಕೊಟ್ಟಿದ್ದಾರೆ.
ನಾನು ನನ್ನ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತೀನಿ ಎಂದು ಸಿಎಂ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಈ ಹಿಂದೆ ಚಿಕ್ಕಬಳ್ಳಾಪುರಕ್ಕೆ ಸಿಎಂರನ್ನ ಕೆ.ಸುಧಾಕರ್ ಆಹ್ವಾನಿಸಿದ್ದರು.ಸಿಎಂ ಬೊಮ್ಮಾಯಿಗೆ ಚಿಕ್ಕಬಳ್ಳಾಪುರಕ್ಕೆ ಆಹ್ವಾನಿಸಿ ತಾನು,ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸುಧಾಕಕರ್ ಹೇಳಿದ್ರು.ಆದ್ರೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಪ್ರಬಲ ಎದುರಾಳಿ ಇಲ್ಲ.ಹಾಗಾಗಿ ಸಿಎಂ ಬೊಮ್ಮಾಯಿಗೆ ಚಿಕ್ಕಬಳ್ಳಾಪುರ ಕ್ಷೇತ್ರನೇ ಬೆಸ್ಟ್ ಎನ್ನಲಾಗಿತ್ತು.ಹಾಗಾಗಿ ಸಿಎಂ ಬೊಮ್ಮಾಯಿಗೆ ನನ್ನ ಕ್ಷೇತ್ರ ಬಿಟ್ಟು ಕೊಡ್ತೀನಿ ಅಂತಾ ಸುಧಾಕರ್ ಹೇಳಿದ್ರು. ಪ್ರಸ್ತುತ ಸುಧಾಕರ್ ನಿಂತ್ರೆ ಸುಲಭವಾಗಿ ಗೆಲ್ಲುವ ಅವಕಾಶ ಇದೆ.ಚನ್ನಗಿರಿ ಕ್ಷೇತ್ರದಿಂದಲೂ ಸಿಎಂ ಸ್ಪರ್ಧೆ ಬಗ್ಗೆ ಚರ್ಚೆ ಆಗಿತ್ತು.ಚನ್ನಗಿರಿಯಲ್ಲಿ ಸಾದರ ಲಿಂಗಾಯತ ಮತಗಳೇ ನಿರ್ಣಾಯಕವಾಗಿತ್ತು.ಆದರೆ ಇದೆಲ್ಲಾ ಗೊಂದಲಗಳಿಗೆ ಸಿಎಂ ಬೊಮ್ಮಾಯಿ ಇದೀಗ ಸ್ಪಷ್ಟನೆ ನೀಡಿದ್ದಾರೆ.