Publish Date: Sun, 04 Jun 2017 (11:31 IST)
Updated Date: Sun, 04 Jun 2017 (11:33 IST)
ಸೈಕಲ್ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ನಾನು ತುಂಬಾ ವರ್ಷ ಸೈಕಲ್ ಓಡಿಸಿದ್ದೇನೆ ಎಂದು ಹೇಳಿ ಸಂತಸ ವ್ಯಕ್ತಪಡಿಸಿದರು.
ಸೈಕಲ್ ಸವಾರಿ ಯೋಜನೆಗೆ ಚಾಲನೆ ನೀಡಿದ ಸಿದ್ದರಾಮಯ್ಯನವರಿಗೆ ಸಚಿವ ಎಚ್.ಸಿ.ಮಹಾದೇವಪ್ಪ, ರೋಷನ್ ಬೇಗ್ ಸೇರಿದಂತೆ ಇತರ ಸಚಿವರು ಸಾಥ್ ನೀಡಿದರು.
ಸೈಕಲ್ ಓಡಿಸುವುದರಿಂದ ಆರೋಗ್ಯ ಚೇತರಿಕೆಗೆ ಸಹಕಾರಿಯಾಗಲಿದೆ. ನಾನು ಕಾಲೇಜಿನಲ್ಲಿ ಓದುತ್ತಿರುವಾಗ ಹೆಚ್ಚಾಗಿ ಸೈಕಲ್ ಬಳಸುತ್ತಿದ್ದೆ ಎಂದು ಹಳೆಯ ನೆನಪುಗಳನ್ನು ಸ್ಮರಿಸಿದರು.
ವೇದಿಕೆಯಿಂದ ಇಳಿದು ಬಂದ ಸಿಎಂ ಸಿದ್ದರಾಮಯ್ಯ, ಸೈಕಲ್ ಓಡಿಸಿ ಸಂತೋಷಪಟ್ಟಿದ್ದಲ್ಲದೇ ಇತರರಿಗೂ ಸೈಕಲ್ ಓಡಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.