ನೋ ಬಾಲ್ ಗೆ ರನೌಟ್ ಆಗಿದ್ದೇನೆ. ಅದಕ್ಕೆ ಬೇಸರವಿದೆ.- ರಾಜುಗೌಡ

ಬುಧವಾರ, 21 ಆಗಸ್ಟ್ 2019 (12:03 IST)
ಬೆಂಗಳೂರು : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 25 ದಿನಗಳ ನಂತರ ಇದೀಗ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಈ ಹಿನ್ನಲೆಯಲ್ಲಿ ಕೆಲವು ಸಚಿವ ಸ್ಥಾನ ಆಕಾಕ್ಷಿಗಳು ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಸಮಾಧಾನಗೊಂಡ ಶಾಸಕರನ್ನು ಭೇಟಿ ಮಾಡಿ ಅವರ ಜೊತೆ ಮಾತುಕತೆ ನಡೆಸಿ ಸಮಾಧಾನಪಡಿಸಿದ್ದಾರೆ.


ಇದೀಗ ಅಸಮಾಧಾನಗೊಂಡ  ಶಾಸಕ ರಾಜುಗೌಡ ಸಿಎಂ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬಾರೀ ಬೇಸರವಾಗಿದೆ. ನೋ ಬಾಲ್ ಗೆ ರನೌಟ್ ಆಗಿದ್ದೇನೆ. ಅದಕ್ಕೆ ಬೇಸರವಿದೆ. ಹೈದರಾಬಾದ್ ಕರ್ನಾಟಕದಲ್ಲಿ 15-16 ಶಾಸಕರಿದ್ದಾರೆ. ಎರಡು ಅಥವಾ ಮೂರು ಶಾಸಕರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದರೆ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದಾರೆ. ಆದರೆ ಮತ್ತೊಂದು ಇನ್ನಿಂಗ್ಸ್ ಇದೆ ನೋಡೋಣ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಸಮಾಧಾನಗೊಂಡ ಶಾಸಕರ ಬಗ್ಗೆ ಈಶ್ವರಪ್ಪ ಹೇಳಿದ್ದೇನು?