Select Your Language

Notifications

webdunia
webdunia
webdunia
webdunia

ನನಗೆ ಬಹಳ ಜನ ಆಪ್ತರಿದ್ದಾರೆ: ಗೃಹ ಸಚಿವ ಪರಮೇಶ್ವರ್

ಜಿ.ಪರಮೇಶ್ವರ್
ಚಿಕ್ಕಮಗಳೂರು , ಮಂಗಳವಾರ, 16 ಮೇ 2017 (20:00 IST)
ಎರಡೆಲೆ ಚಿಹ್ನೆ ಲಂಚದ ಪ್ರಕರಣದಲ್ಲಿ ಸಚಿವ ಪರಮೇಶ್ವರ್ ಆಪ್ತನನ್ನು ಬಂಧಿಸಲಾಗಿದೆ ಎನ್ನುವ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್ ನನಗೆ ಬಹಳ ಜನ ಆಪ್ತರಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
 
ಆಪ್ತರೆಂದರೆ ನಿಮ್ಮ ಪ್ರಕಾರ ಏನು ಎಂದು ಸುದ್ದಿಗಾರರಿಗೆ ಪ್ರಶ್ನಿಸಿದ ಅವರು, ನಾನು ಪ್ರವಾಸದಲ್ಲಿರುವುದರಿಂದ ವಿ.ಸಿ.ಪ್ರಕಾಶ್ ಬಂಧನದ ಬಗ್ಗೆ ಮಾಹಿತಿಯಿಲ್ಲ. ಸರಿಯಾದ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದರು. 
 
ಪೊಲೀಸರು ಕಾನೂನಿನ ಪ್ರಕಾರ ಕ್ರಮಕೈಗೊಳ್ಳುತ್ತಾರೆ.ಕಾನೂನು ಬಿಟ್ಟು ಬೇರೆ ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
 
 ತಮಿಳುನಾಡಿನ ಎಐಎಡಿಎಂಕೆ ಪಕ್ಷಕ್ಕೆ ಎರಡೆಲೆ ಚಿಹ್ನೆ ಕೊಡಿಸುವುದಾಗಿ ಹಣ ಪಡೆದ ಆರೋಪದ ಮೇಲೆ ಗೃಹ ಸಚಿವ ಜಿ.ಪರಮೇಶ್ವರ್ ಆಪ್ತ ಆರೋಪಿ ವಿ.ಸಿ ಪ್ರಕಾಶ್‌ನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಮಲ್ಯಗೆ ಹಿನ್ನೆಡೆ: ಅರ್ಜಿ ವಜಾಗೊಳಿಸಿದ ಜಾರಿ ನಿರ್ದೇಶನಾಲಯ