ಬೆಂಗಳೂರು,ಸೆ.15 : ಸುಪ್ರಿಂಕೋರ್ಟ್ ಆದೇಶಗಳು ಬೇಕಾದಷ್ಟಿವೆ. ಸಂಸ್ಕೃತಿ ನಂಬಿಕೊಂಡು ಇರುವಂತ ಪಕ್ಷ ಬಿಜೆಪಿ. ರಾಜ್ಯದ ಯಾವುದೇ ದೇವಸ್ಥಾನವನ್ನು ಒಡೆಯಲು ನಂದಂತೂ ಒಪ್ಪಿಗೆ ಇಲ್ಲ . ಒಂದೇ ಒಂದು ದೇವಸ್ಥಾನ ಒಡೆಯದರೂ ತಪ್ಪೇ ಎಂದು ಸಚಿವ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಇಡೀ ಕರ್ನಾಟಕ ರಾಜ್ಯದಲ್ಲಿ ದೇವಸ್ಥಾನ ಒಡೆಯುವ ಆತಂಕ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರ ಇರುವಂತ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ದೇವಸ್ಥಾನ ಒಡೆದು ಹಾಕಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯವರು ಯಾಕೆ ದೇವಸ್ಥಾನ ಮಾತ್ರ ಮುಟ್ಟಿದರು ಅನ್ನೋದು ಕೂಡ ಪ್ರಶ್ನೆ ಯೇ. ಕಾಂಗ್ರೆಸ್ ನಾಯಕರು ಹೇಳಿದ್ದರಲ್ಲೂ ಯಾವುದೇ ತಪ್ಪಿಲ್ಲ. ಈಗಲಾದರೂ ಕಾಂಗ್ರೆಸ್ ನಾಯಕರಿಗೆ ದೇವಸ್ಥಾನ ಉಳಿಸಬೇಕು ಎಂದು ಅನಿಸಿದೆಯಲ್ಲ ಅದು ಮುಖ್ಯ ಎಂದರು.
ಯಾರ ವಿರುದ್ದ ಕ್ರಮ ಎನ್ನೋದು ನನ್ನ ಉದ್ದೇಶವಲ್ಲ. ಆದರೆ ಇಡೀ ರಾಜ್ಯದಲ್ಲಿ ದೇವಸ್ಥಾನಗಳನ್ನು ಯಾರೂ ಒಡೆಯಬಾರದು. ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಎಷ್ಟೇ ದೇವಸ್ಥಾನಗಳನ್ನು ಪಟ್ಟಿ ಮಾಡಿರಲಿ, ಯಾವುದನ್ನೂ ಒಡೆಯಬಾರದು ಎಂದರು.